Index Page

ನೀ ನನ್ನ ಜೊತೆಗಿರಲು

ನೀ ನನ್ನ ಜೊತೆಗಿರಲು
ನನಗೆಂದಿಗೂ ಭಯವೇ ಇಲ್ಲ
ನೀ ನನ್ನ ಜೊತೆಗಿರಲು
ನನಗೆಂದಿಗೂ ಸೋಲೆ ಇಲ್ಲ (2)

ಫರೋಹನೇ ಎದ್ದರು ಗೋಲಿಯಾತನೆ ನಿಂತರು
ನೀ ನನ್ನ ಜೊತೆಯಲೇ ಇರುವೆ ದೇವ (2)

ಯೇಸುವೇ ನೀ ನನ್ನ ಬಲವು
ಯೇಸುವೇ ನೀ ನನ್ನ ಜಯವು
ಯೇಸುವೇ ನೀ ನನ್ನ ಧೈರ್ಯವು
ಯೇಸುವೇ ನೀ ನನ್ನ ಎಲ್ಲವೂ (2)

ನೀ ನನ್ನ ಜೊತೆಗಿರಲು
ನನಗೆಂದಿಗೂ ಭಯವೇ ಇಲ್ಲ
ನೀ ನನ್ನ ಜೊತೆಗಿರಲು
ನನಗೆಂದಿಗೂ ಸೋಲೆ ಇಲ್ಲ

ಸಿಂಹದ ಗವಿಯಲ್ಲಿ ದಾನಿಯೇಲನ
ಜೊತೆಗಿದ್ದು ಕಾದದ್ದು ನೀನೇ ತಾನೇ
ಉರಿಯುವ ಬೆಂಕಿಯಿಂದ ನಿನ್ನ ಭಕ್ತರನ್ನು
ಜೊತೆಗಿದ್ದು ಬಿಡಿಸಿದ್ದು ನೀನೇ ತಾನೇ (2)

ನೀನು ನನ್ನಯ ದೇವರು ಯೇಸುವೇ
ನೀನು ನನ್ನಯ ಕುರುಬನು ಯೇಸುವೇ (2)

ಯೇಸುವೇ ನೀ ನನ್ನ ಬಲವು
ಯೇಸುವೇ ನೀ ನನ್ನ ಜಯವು
ಯೇಸುವೇ ನೀ ನನ್ನ ಧೈರ್ಯವು
ಯೇಸುವೇ ನೀ ನನ್ನ ಎಲ್ಲವೂ

ನೀ ನನ್ನ ಜೊತೆಗಿರಲು
ನನಗೆಂದಿಗೂ ಭಯವೇ ಇಲ್ಲ
ನೀ ನನ್ನ ಜೊತೆಗಿರಲು
ನನಗೆಂದಿಗೂ ಸೋಲೆ ಇಲ್ಲ

ಕಷ್ಟ ನಷ್ಟ ನೀಗೀ ಹೋಗುತ್ತೆ
ನೀನು ನನ್ನ ಜೊತೆಗಿರಲು
ಚಿಂತೆ ಕಣ್ಣೀರು ಮಾಯಾವಾಗುತ್ತೆ
ನೀನು ನನ್ನ ಜೊತೆಗಿರಲು (2)

ಇಂದಿನ ಸ್ಥಿತಿ ಚೇಂಜ್ ಆಗುತ್ತೆ
ಅದ್ಬುತ ಇಂದೆ ನಡೆಯುತ್ತೆ (2)

ಯೇಸುವೇ ನೀ ನನ್ನ ಬಲವು
ಯೇಸುವೇ ನೀ ನನ್ನ ಜಯವು
ಯೇಸುವೇ ನೀ ನನ್ನ ಧೈರ್ಯವು
ಯೇಸುವೇ ನೀ ನನ್ನ ಎಲ್ಲವೂ

ನೀ ನನ್ನ ಜೊತೆಗಿರಲು
ನನಗೆಂದಿಗೂ ಭಯವೇ ಇಲ್ಲ
ನೀ ನನ್ನ ಜೊತೆಗಿರಲು
ನನಗೆಂದಿಗೂ ಸೋಲೆ ಇಲ್ಲ

ಶೋಧನೆ ಜಯಿಸುವೆ ವೈರಿಯ ಗೆಲ್ಲುವೆ
ನಿನ್ನಯ ಬಲದಿಂದ ಮುನುಗ್ಗುವೆ
ಕೃಪೆಯ ಮೇಲೆ ಕೃಪೆಯ ಹೊಂದುವೆ
ಆಶೀರ್ವಾದವಾಗಿ ನಾ ಬಾಳುವೆ (2)

ನನ್ನ ಕೈ ಬಿಡದ ದೇವರು ನೀನೇ
ನಾ ನಂಬುವ ಖೇಡ್ಯವು ನೀನೇ (2)

ಯೇಸುವೇ ನೀ ನನ್ನ ಬಲವು
ಯೇಸುವೇ ನೀ ನನ್ನ ಜಯವು
ಯೇಸುವೇ ನೀ ನನ್ನ ಧೈರ್ಯವು
ಯೇಸುವೇ ನೀ ನನ್ನ ಎಲ್ಲವೂ

ನೀ ನನ್ನ ಜೊತೆಗಿರಲು
ನನಗೆಂದಿಗೂ ಭಯವೇ ಇಲ್ಲ
ನೀ ನನ್ನ ಜೊತೆಗಿರಲು
ನನಗೇಂದಿಗೂ ಸೋಲೆ ಇಲ್ಲ (2)

ಫರೋಹನೇ ಎದ್ದರು ಗೋಲಿಯತನೆ ನಿಂತರು
ನೀ ನನ್ನ ಜೊತೆಯಲೇ ಇರುವೆ ದೇವ (2)

ಯೇಸುವೇ ನೀ ನನ್ನ ಬಲವು
ಯೇಸುವೇ ನೀ ನನ್ನ ಜಯವು
ಯೇಸುವೇ ನೀ ನನ್ನ ಧೈರ್ಯವು
ಯೇಸುವೇ ನೀ ನನ್ನ ಎಲ್ಲವೂ (2)

Print