Index Page

ಕೈಯ ತಟ್ಟಿ ಹಾಡಿವ

ಕೈಯ ತಟ್ಟಿ ಹಾಡಿರಿ ಕರ್ತನ ಸ್ತುತಿಸಿರಿ
ಸರ್ವಶಕ್ತಿ ಶಬ್ದದಿಂದ ಕೀರ್ತನೆಗಳ ಹಾಡಿರಿ
ಹಾಲ್ಲೆಲೂಯ ....ಹಾಲ್ಲೆಲೂಯ...

ಹಲ್ಲೆಲೂಯ ಹಾಡಲು ಅಲೆಗಳಾಗಿ ಬಂದನು
ಬಂದನೇಸು ಕರ್ತನು ನೋವನೆಲ್ಲಾ ಕಳೆದನು
ಹಲ್ಲೆಲೂಯ... ಹಲ್ಲೆಲೂಯ...

ಸ್ತುತಿಗಳಲ್ಲೆ ಇರುವನು ಸ್ತುತಿಗೆ ಕಿವಿಯ ಕೊಡುವನು
ಪಾಪವನ್ನು ಕ್ಷಮಿಸಿ ಅವನು ಪಾಪಿಯನ್ನು ಸೆಳೆದನು
ಹಲ್ಲೆಲೂಯ... ಹಲ್ಲೆಲೂಯ...

ಶುದ್ಧವಾದ ಹೃದಯದಿ ಕೀರ್ತನೆಗಳ ಹಾಡಲು
ಶಾಂತಿಯನ್ನು ಕೊಟ್ಟನು ರಕ್ಷಣೆಗೆ ನಿಂತನು
ಹಲ್ಲೆಲೂಯ ...ಹಲ್ಲೆಲೂಯ...

Print