ಯೇಸು ಪ್ರೀತಿಸುತ್ತಾನೆ

ಯೇಸು ಪ್ರೀತಿಸುತ್ತಾನೆ
ನಿನ್ನನ್ನು ಪ್ರೀತಿಸುತ್ತಾನೆ
ನಿನಗಾಗಿಯೇ ಸ್ವಪ್ರಾಣವ
ಅರ್ಪಿಸಿ ನಿನ್ನನ್ನು ಪ್ರೀತಿಸುತಾನೆ

ನಿನ್ನ ಸಮಸ್ಯೆ ಎನಿದ್ದರೂ
ಚಿಂತೆಯಲ್ಲಿಯೇ ಮುಳುಗಿದ್ದರೂ
ಯೇಸುವು ನಿನಗೆ
ವಿಶೇಷ ಪರಿಹಾರ ಮಾಡುವನು

ನಿನ್ನಲ್ಲಿ ಅನೇಕ ಕಷ್ಟಗಳು
ಸಹಿಸಿಕೊಳ್ಳದ ದುಃಖಗಳು
ಸ್ವಾಮಿಯು ನಿನಗೆ
ಅಪಾರ ಸಹಾಯ ಮಾಡುವನು

ಯೇಸು ಪ್ರೀತಿಸುತ್ತಾನೆ
ನಿನ್ನನ್ನು ಪ್ರೀತಿಸುತ್ತಾನೆ
ನಿನಗಾಗಿಯೇ ಸ್ವಪ್ರಾಣವ
ಅರ್ಪಿಸಿ ನಿನ್ನನ್ನು ಪ್ರೀತಿಸುತಾನೆ

ನಿನ್ನ ಪಾಪ ಎಷ್ಟಿದ್ದರೂ
ಅಪರಾಧದಿಂದ ತುಂಬಿದ್ದರು
ಪ್ರಭುವು ನಿನ್ನನ್ನು
ಮನ್ನಿಸಿ ನೂತನ ಪಡಿಸುವನು

ಯೇಸು ಪ್ರೀತಿಸುತ್ತಾನೆ
ನಿನ್ನನ್ನು ಪ್ರೀತಿಸುತ್ತಾನೆ
ನಿನಗಾಗಿಯೇ ಸ್ವಪ್ರಾಣವ
ಅರ್ಪಿಸಿ ನಿನ್ನನ್ನು ಪ್ರೀತಿಸುತಾನೆ