ಯೇಸು ನನ್ನ ರಕ್ಷಕನು ಸ್ತುತಿಸುತ ಹಾಡುವೆನು
ಯೇಸು ನನ್ನ ಶಿಕ್ಷಕನು ನಿತ್ಯವು ಭಜಿಸುವೆನು
ಅತಿಶಯವಾದವನು ದೇವಾ ಅದ್ಭುತ ಸ್ವರೂಪನು
ಪ್ರೀತಿಯ ತೋರುವನು ಸುಖ ಶಾಂತಿಯ ನೀಡುವನು(೨)
ಯೇಸು ನನ್ನ ರಕ್ಷಕನು ಸ್ತುತಿಸುತ ಹಾಡುವೆನು
ಯೇಸು ನನ್ನ ಶಿಕ್ಷಕನು ನಿತ್ಯವು ಭಜಿಸುವೆನು
ಉನ್ನತನಾದವನು ನಮ್ಮ ಪಾಪವ ನೀಗುವನು
ಸ್ನೇಹವ ತೋರಿದನು ನಿತ್ಯ ಆಸರೆ ನೀಡುವನು(೨)
ಯೇಸು ನನ್ನ ರಕ್ಷಕನು ಸ್ತುತಿಸುತ ಹಾಡುವೆನು
ಯೇಸು ನನ್ನ ಶಿಕ್ಷಕನು ನಿತ್ಯವು ಭಜಿಸುವೆನು
ಮಹಿಮೆಯ ರಾಜನು ಪರಲೋಕವ ತ್ಯಜಿಸಿದನು
ದೀನತೆ ತೋರಿದನು ಇಹಲೋಕದಿ ಬಾಳಿದನು(೨)