1)ಯೇಸು ನಮಗೆಂತ ಮಿತ್ರ , ಎಂಥಹ ದಿವ್ಯ ಗುರುವು
ಎಲ್ಲ ಆತನಾ ಚರಿತ್ರಾ, ಪಾಪಿಗೆ ಸುವರ್ಥೆಯೂ
ತನ್ನಿ ತನ್ನಿ ಎಲ್ಲ ತನ್ನಿ , ಚಿಂತೆ ದುಃಖ ವೇದನೆ
ಬನ್ನಿ , ಬನ್ನಿ ಮಾಡ ಬನ್ನಿ , ಯೇಸುವಿಗೆ ಪ್ರಾರ್ಥನೆ
Yesu namagentha mithra, yenthaha divya guruvu
Yella athana charithra ,papige suvartheyu
Thanni thanni yella thanni ,chinthe dukkha vedhane
Banni banni maada banni, yesuvige prarthane
2)ಆತ್ಮ ವೈರಿ ಹತ್ರ ಬಂದು ,ಮೋಸ ತಂತ್ರ ಗೈದರೆ
ರಕ್ಷಿಸೆನ್ನ ಯೇಸು ಎಂದು, ಬೇಡು ಭಯವಿಲ್ಲದೆ
ನಮ್ಮ ಹತ್ರದಲ್ಲಿದ್ದಾನೆ, ಬಲ್ಲನೆಮ್ಮ ಶೋಧನೆ
ನಮ್ಮನಾದ್ಧರಿಸುತ್ತಾನೆ ಕೇಳಿ ನಮ್ಮ ಪ್ರಾರ್ಥನೆ
Aathma vairi hathra bandu, mosa thanthra gaidare
Rakshisenna yesu yendu, bedu bhayavillade
Namma hathradalliddane , ballanemma shodhane
Nammanadarisutthane, keli namma prarthane
3)ಸ್ವಂತ ಬಲ ನಿನಗಿಲ್ಲ , ಇಲ್ಲ ಬಂಧು ಪ್ರೀತಿಯು
ನಂಬತಕ್ಕ ಪುಣ್ಯವಿಲ್ಲ, ಸಾವು ಮಾತ್ರ ಕಾಣಲು
ಯೇಸು ನಿನಗಿರುತ್ತಾನೆ ,ಆತ ನಂಬಿಗಸ್ಥಾನೆ
ನಿನ್ನನ್ನಪ್ಪಿಕೊಳ್ಳುತ್ತಾನೆ ,ಕೇಳಿ ನಿನ್ನ ಪ್ರಾರ್ಥನೆ
Swantha bala ninagilla, illa bandhu preethiyu
Nambathakka punyavilla, saavu maathra kanalu
Yesu ninagiruthane, aatha nambigasthane
Ninnanappikollutthane ,keli ninna prarthane