Index Page

ಸುವಾರ್ತೆ ತಲುಪದ ಊರು


ಸುವಾರ್ತೆ ತಲುಪದ ಊರು ಇರಲೆ ಬಾರದು
ಸಭೆಯು ಇಲ್ಲದ ಗ್ರಾಮ ಇರಬಾರದೆಲ್ಲೆಲಿಯು
ಇದುವೇ ಇದುವೇ ಇದುವೇ ನನ್ನ ಬಯಕೇ
ಇದುವೇ ಇದುವೇ ಇದುವೇ ನನ್ನ ಗುರಿಯು

1. ಈ ನನ್ನ ಗುರಿಯು ಸಾಧಿಸಲು ನಾ
ಕಡೆಗಣಿಸುವೆ ನನ್ನ ಪ್ರಾಣವನೇ
ಹೋರುವೆನು ನನ್ನ ಶಿಲುಬೆಯನ್ನು
ಸಹಿಸುವೆ ನಾನು ಶ್ರಮೆಗಳನ್ನು
||ಸಂತಸದಿಂದಲೇ ಸಾಗುವೇ
ಶುಭವಾರ್ತೆಯನ್ನು ನಾ ಸಾರುವೆ||

2. ಹಸಿವೆಯಿಂದ ಬಳಲಿದರು ನಾ
ಸೇವೆಯನ್ನು ಬಿಡಲಾರೆನು ನಾ
ನಿಂದೆಗಳನ್ನು ತಾಳುವೆನು ನಾ
ನೀತಿಯನ್ನು ತೋರೆಯುವೇನು ಎಂದೂ
||ಸಂತಸದಿಂದಲೇ ಸಾಗುವೇ
ಶುಭವಾರ್ತೆಯನ್ನು ನಾ ಸಾರುವೆ||

3. ಯೇಸು ನನ್ನ ಮುಂದೆ ಮುಂದೆ
ಸಾಗುವೆ ನಾ ಹಿಂದೆ ಹಿಂದೆ
ಆತನೇ ನನ್ನ ಆಶ್ರವು
ಹೆದರೇನೂ ನಾ ಎಂದಿಗೂ
||ಸಂತಸದಿಂದಲೇ ಸಾಗುವೇ
ಶುಭವಾರ್ತೆಯನ್ನು ನಾ ಸಾರುವೆ||