ಸ್ತುತಿಸಿರಿ ಯೇಸು ನಾಮವ
ಭಗಿಸಿರಿ ಯೇಸು ನಾಮವ
ಪರಲೋಕದಿಂದ ಇಳಿದು ಬಂದ
ಪಾಪಿಗಳನ್ನು ಬಿಡಿಸಲು ಬಂದ
ಪರಿಶುದ್ಧನಾಮವನು, ಪರಿಶುದ್ಧನಾಮವನು
ಇಹಲೋಕದಲ್ಲೂ ಪರಲೋಕದಲ್ಲೂ
ಪರಿಶುದ್ಧರಿಂದ ಸ್ತುತಿಸಲ್ಪಡುವ
ಪಾವನನಾಮವನು, ಪಾವನನಾಮವನು
ಮರಣದಿಂದ ಪಾಪದಿಂದ ಪಾತಾಳದಿಂದ
ಸೈತಾನ ಅಧಿಕಾರದಿಂದ ಬಿಡಿಸಿದ
ಶಿಲುಬೆಯಮರಣದಿಂದ, ಶಿಲುಬೆಯಮರಣದಿಂದ
ರಾಜಾಧಿ ರಾಜನ ದೇವಾದಿನ ದೇವನ
ಮೃತ್ಯುಂಜಯನಾಗಿ ಜೀವಿಸುವ ದೇವನ
ಮಹಿಮೆಯನಾಮವನು, ಮಹಿಮೆಯನಾಮವನು