ಸ್ತುತಿ ಮಾಡುವೆ ಕರ್ತನಿಗೆ ಅದ್ಭುತ ರಕ್ಷಕಗೆ ||2||
ಜೀವಾಂತ್ಯ ದಿನವೆಲ್ಲಾ ಯೇಸುವಿಗೊಬ್ಬರಿಗೆ ||2||
1.ನನ್ನ ಮನದಲ್ಲಿ ನಿನ್ನ ಮಾತು ನನ್ನ
ಬಾಯಲ್ಲಿ ನಿನ್ನ ಹಾಡು ||2||
ಸಾರುವೆ ಸುವಾರ್ತೆಯನು ಎಲ್ಲಾ ಜನಗಳಿಗೆ ||2||
ಆಶೀರ್ವದಿಸು ನಿನ್ನ ನಂಬುವವರಿಗೆ ||2||
2.ನಿನ್ನ ವಾಕ್ಯದಂತೆ ನಡೆಯುವೆ ನಾ
ನಿನ್ನ ಆತ್ಮದಿ ತುಂಬಿಸು ನನ್ನ ||2||
ಪರಿಶುದ್ಧ ಆತ್ಮದಿಂದ ಸಾರುವೆ ಸುವಾರ್ತೆಯನ್ನು ||2||
ಅಭಿಷೇಕಿಸು ನಿನ್ನ ನಂಬುವವರನ್ನು ||2||
3.ನಿನ್ನ ನಾಮವೆ ಮಹಿಮೆ ಹೊಂದಲಿ
ನಿನ್ನ ರಾಜ್ಯಕ್ಕೆ ಎಲ್ಲಾರು ಬರಲಿ ||2||
ಎಲ್ಲಾ ಜಾತಿ ಜನ ನಿನ್ನನ್ನು ಸ್ತುತಿ ಮಾಡಲಿ ||2||
ನಿನ್ನ ಬೆಳಕಲ್ಲಿ ಎಲ್ಲಾರು ನಡೆಯಲಿ ||2||
ಸ್ತುತಿ ಮಾಡುವೆ ಕರ್ತನಿಗೆ ಅದ್ಭುತ ರಕ್ಷಕಗೆ ||2||
ಜೀವಾಂತ್ಯ ದಿನವೆಲ್ಲಾ ಯೇಸುವಿಗೊಬ್ಬರಿಗೆ ||2||