ಸ್ತುತಿಸೋಣಾ ಸ್ತುತಿಸೋಣಾ
ನಾವೆಲ್ಲ ಒಂದಾಗಿ ಇಂದು
ಬಾಗೋಣಾ ಶಿರವನ್ನು
ಕರ್ತನ ಸನ್ನಿಧಿಗೆ ಬಂದು
ಗಗನದಿ ಹಾರುವ ಹಕ್ಕಿಗಳ
ನೀರಿನಲ್ಲಿ ಓಡುವ ಮೀನುಗಳ
ಕಾಡಿನಲ್ಲಿ ಆಡುವ ಪ್ರಾಣಿಗಳ
ಸೃಷ್ಟಿಸಿದ ದೇವರಿಗೆ ಜಯ ಹೇಳುವ
ಹಲ್ಲೆಲೂಯ - 4
ಸ್ತುತಿಸೋಣಾ ಸ್ತುತಿಸೋಣಾ
ನಾವೆಲ್ಲ ಒಂದಾಗಿ ಇಂದು
ಬಾಗೋಣಾ ಶಿರವನ್ನು
ಕರ್ತನ ಸನ್ನಿಧಿಗೆ ಬಂದು
ಹಗಳನ್ನು ಬೆಳಗುವ ಸೂರ್ಯನ
ಇರುಳನು ಸವಿಯುವ ಚಂದ್ರನ
ಅತಿಶಯ ಪರಾಕ್ರಮಿ ಮಾನವನಾ
ಸೃಷ್ಟಿಸಿದ ದೇವರಿಗೆ ಜಯ ಹೇಳುವ
ಹಲ್ಲೆಲೂಯ - 4