ಸ್ಥಿರಪಡಿಸುವಾತನೇ

ಸ್ಥಿರಪಡಿಸುವಾತನೇ ಬಲಪಡಿಸುವಾತನೇ
ಕೆಳಬಿದ್ದ ಸ್ಥಳದಲ್ಲೆ ನಿಲ್ಲಿಸುವಾತನೇ
ಘನಪಡಿಸುವಾತನೇ ಹೆಚ್ಚಿಸುವಾತನೇ
ನಮ್ಮ ಪರ ನಿಂತು ಜಯ ನೀಡುವಾತನೇ (2)

ಏನಾದರು ನೀನೇ ಮಾಡಿ
ಕಥೆಯೆಲ್ಲಾ ಬದಲಾಗಿಸುವೆ
ನಿನ್ನ ನಾಮಕ್ಕೆ ಎಲ್ಲಾ ಮಹಿಮೆ ತಂದುಕೊಳ್ಳುವೆ (2)
ಯೇಸುವೇ ಯೇಸುವೇ ನಿನಗೆ ಎಲ್ಲಾ ಸಾಧ್ಯವೇ (2)

ಸರ್ವಕೃಪಾನಿಧಿ ಪರಮ ಕುಂಬಾರನೇ
ನಮ್ಮಯ ಜೀವವು ನಿನ್ನ ಕೈಯಲ್ಲಿದೆ (2)
ಓ ದೇವಾ ನಿಮ್ಮಾಲೋಚನೆಯೆಲ್ಲಾ ಉತ್ಕೃಷ್ಟವಾಗಿವೆ
ನಮ್ಮೂಹೆಗೆ ಮೀರಿದ ಕಾರ್ಯಗಳೆಷ್ಟೋ ಮಾಡುತ್ತಲೇ ಇವೆ(2)

ಏನಾದರು ನೀನೇ ಮಾಡಿ
ಕಥೆಯೆಲ್ಲಾ ಬದಲಾಗಿಸುವೆ
ನಿನ್ನ ನಾಮಕ್ಕೆ ಎಲ್ಲಾ ಮಹಿಮೆ ತಂದುಕೊಳ್ಳುವೆ (2)
ಯೇಸುವೇ ಯೇಸುವೇ ನಿನಗೆ ಎಲ್ಲಾ ಸಾಧ್ಯವೇ (2)

ನಿನ್ನಾಜ್ಞೆ ಇಲ್ಲದೆ ಏನಾಗದೆಂದಿಗೂ
ನಿನ್ನ ಬೇಲಿ ಮೀರಲು ವೈರಿಗೆ ಸಾಧ್ಯವೋ?(2)
ಓ ದೇವಾ ನೀವೇ ನಮ್ಮೊಡನಿರಲು ಅಷ್ಟೇ ಸಾಕಯ್ಯಾ
ಅಪವಾದಿ ಬಗೆದ ಕೇಡುಗಳ್ಳೆಲ್ಲಾ ಮೇಲಾಗಿ ಬರುವವು(2)

ಏನಾದರು ನೀನೇ ಮಾಡಿ
ಕಥೆಯೆಲ್ಲಾ ಬದಲಾಗಿಸುವೆ
ನಿನ್ನ ನಾಮಕ್ಕೆ ಎಲ್ಲಾ ಮಹಿಮೆ ತಂದುಕೊಳ್ಳುವೆ (2)
ಯೇಸುವೇ ಯೇಸುವೇ ನಿನಗೆ ಎಲ್ಲಾ ಸಾಧ್ಯವೇ (4)