ಶ್ರೀ ಯೇಸು ನಾಮ ಅತಿಶಯ ನಾಮ
ಪಾಪಿಗೆ ಇಂಪಾದ ನಾಮ.
ಹಲ್ಲೆಲೂಯ ಶ್ರೀ ಯೇಸು ನಾಮ..
ಪಾಪ ಪರಿಹಾರಕ್ಕಾಗಿ ಪಾಪಿಗಳ ಹುಡುಕಿ
ಧರಣಿಗೆ ಬಂದ ನಾಮ
ಪಾಪರಹಿತ ಜೀವಿತದ ಮಾದರಿಯ ತೋರಿಸಿದ
ಪರಿಶುದ್ದ ಪುಣ್ಯನಾಮ
ಎಲ್ಲಾ ನಾಮದಲಿಯೂ ಮೇಲಾದ ನಾಮ
ಯೇಸುವಿನ ದಿವ್ಯನಾಮ
ಸರ್ವಜನರೆಲ್ಲಾ ಅಡ್ಡಬಿದ್ದ ಸ್ತೋತ್ರ ಮಾಡಿ
ಹರ್ಶದಿಂದ ಹಾಡುವ ನಾಮ.
ಶ್ರೀ ಯೇಸು ನಾಮ ಅತಿಶಯ ನಾಮ
ಪಾಪಿಗೆ ಇಂಪಾದ ನಾಮ.
ಹಲ್ಲೆಲೂಯ ಶ್ರೀ ಯೇಸು ನಾಮ..
ಲೆಕ್ಕವಿಲ್ಲದಷ್ಟು ಪಾಪ ನನ್ನಿಂದ ತೆಗೆಯಲು
ನನಗಾಗಿ ಬಂದ ನಾಮ
ಅನ್ಯನೆಂದು ತಳ್ಳದೆನ್ನ ಧನ್ಯನಾಗಿ ಮಾಡಲು ಬಂದ
ಉನ್ನತನ ಪುಣ್ಯನಾಮ.
ಶ್ರೀ ಯೇಸು ನಾಮ ಅತಿಶಯ ನಾಮ
ಪಾಪಿಗೆ ಇಂಪಾದ ನಾಮ.
ಹಲ್ಲೆಲೂಯ ಶ್ರೀ ಯೇಸು ನಾಮ..
ಭೂತಬಾದಿತರಿಗೆ ನಾನಾರೋಗಿಗಳಿಗೆ
ಸ್ವಸ್ಥ ಮಾಡುವಂತಹ ನಾಮ
ಕುರುಡರಿಗೂ ಕುಂಟಿರಿಗೂ ಕುಷ್ಟರೋಗಿ ಗಳಿಗೆಲ್ಲಾ
ಬಿಡುಗಡೆ ಕೊಡುವ ನಾಮ.
ಶ್ರೀ ಯೇಸು ನಾಮ ಅತಿಶಯ ನಾಮ
ಪಾಪಿಗೆ ಇಂಪಾದ ನಾಮ.
ಹಲ್ಲೆಲೂಯ ಶ್ರೀ ಯೇಸು ನಾಮ..