ಶಿಲುಬೆಯನ್ನು ವಹಿಸಿಕೊಂಡು

ಶಿಲುಬೆಯನ್ನು ವಹಿಸಿಕೊಂಡು
ಬೀದಿಯಲ್ಲಿ ಸಾಗಿದನು
ನನ್ನೇಸುವು ನನಗಾಗಿಯೇ ನಿಂದೆಯನ್ನು
ಸಹಿಸಿದನು ||2||

ಯೆರೂಸಲೇಮೇ, ಯೆರೂಸಲೇಮೇ,
ನಿನ್ನ ಜನರು ಪ್ರಿಯನನ್ನು
ಕರುಣಿಸದೆ ದ್ರೋಹಿಯಾದ ಬರಬ್ಬನನ್ನೇ
ಬಯಸಿದರು ||2||

ಶಿಲುಬೆಯನ್ನು ವಹಿಸಿಕೊಂಡು
ಬೀದಿಯಲ್ಲಿ ಸಾಗಿದನು
ನನ್ನೇಸುವು ನನಗಾಗಿಯೇ ನಿಂದೆಯನ್ನು
ಸಹಿಸಿದನು ||2||

ಈ ಪ್ರೀತಿಯ ಪ್ರತಿಯಾಗಿ ನಿನ್ನನ್ನೇ
ಒಪ್ಪಿಸು ನೀ, ಈ ದೃಶ್ಯವು
ನಿನ್ನ ಹೃದಯವ ಹಿಮದಂತೆಯೆ
ಕರಗಿಸಲಿ ||2||

ಶಿಲುಬೆಯನ್ನು ವಹಿಸಿಕೊಂಡು
ಬೀದಿಯಲ್ಲಿ ಸಾಗಿದನು
ನನ್ನೇಸುವು ನನಗಾಗಿಯೇ ನಿಂದೆಯನ್ನು
ಸಹಿಸಿದನು ||2||

ಕಲ್ವಾರಿಯ ಬೆಟ್ಟದಲ್ಲಿ ನನ್ನ ರಾಜನ ವಧಿಸಿದರು
ಪಾಪವಿಲ್ಲದ ನನ್ನ ಒಡಿಯ, ನನಗಾಗಿಯೆ
ಬಲಿಯಾದ ||2||

ಶಿಲುಬೆಯನ್ನು ವಹಿಸಿಕೊಂಡು ಬೀದಿಯಲ್ಲಿ
ಸಾಗಿದನು
ನನ್ನೇಸುವು ನನಗಾಗಿಯೇ ನಿಂದೆಯನ್ನು
ಸಹಿಸಿದನು ||2||