Index Page

ಸರ್ವದಲ್ಲು ಉನ್ನತನೇ

ಸರ್ವದಲ್ಲು ಉನ್ನತನೇ
ಮಹಿಮೆಯ ಅರಸನೇ
ಪ್ರೀತಿಸುವ ತಂದೆಯೇ
ಕ್ಷಮಿಸುವ ಕರ್ತನೇ (2)

ಆರಾಧಿಸುವೆ ನಿನ್ ಆರಾಧಿಸುವೆ
ಆರಾಧಿಸುವೆ ನಿನ್ನ (2)

ನಿನ್ನಯ ಹಾಗೆ ನಮ್ಮನು ಯಾರು
ಪ್ರೀತಿಸಲು ಸಾಧ್ಯವಿಲ್ಲಾ (2)
ಕಲ್ವಾರಿ ಕ್ರೂಜೆಯಲ್ಲಿ
ನಿನ್ನ ಕುವರನನ್ನೇ ನನಗಾಗಿ ಅರ್ಪಿಸಿರುವೇ (2)

ಆರಾಧಿಸುವೆ ನಿನ್ ಆರಾಧಿಸುವೆ
ಆರಾಧಿಸುವೆ ನಿನ್ನ (2)

ಕರುಣಾಳು ದೇವನೇ
ಎನ್ ಬಾಳ ಜ್ಯೋತಿಯೇ
ಕೇಳು ಈ ಪ್ರಾರ್ಥನೇ (2)
ನನ್ ಮೌನರಾಗ ನೀನೇ ಹೃದಯ
ಬಡಿತವಾಗಿ ಜೀವಿಸು ನನ್ನೊಳು ದೇವನೇ (2)

ಆರಾಧಿಸುವೆ ನಿನ್ ಆರಾಧಿಸುವೆ
ಆರಾಧಿಸುವೆ ನಿನ್ನ (4)