ಸರ್ವ ಶಕ್ತನು

ಸರ್ವ ಶಕ್ತನು ನನ್ನ ಸ್ವಂತವಾದನು
ಮರಣ ಗೆದ್ದನು ನನ್ನ ಜೀವರಾಜನು
ಸರ್ವ ಶಕ್ತನು ನನ್ನ ಯಜಮಾನ
ಮರಣ ಜಯಿಸಿದ ನನ್ನ ಮದಲಿಂಗನು
ಆಹಾ ಹಾ ಇದು ಅತಿಶಯ ತಾನೇ |
ಓ ಹೊಹೊ ಇದು ನಿಜವಲ್ಲವೇ ||2||

ಸಂತೋಷವು ಸಮಾಧಾನವು
ನನ್ನ ಮನದೊಳು ಉಕ್ಕುತಿದೆ ||2||
ಪಾಪವೆಲ್ಲಾ ಮನ್ನಿಸಿದಾ
ಭಯಗಳೆಲ್ಲಾ ನೀಗಿಸಿದ ||2||

ಸರ್ವ ಶಕ್ತನು ನನ್ನ ಸ್ವಂತವಾದನು
ಮರಣ ಗೆದ್ದನು ನನ್ನ ಜೀವರಾಜನು
ಸರ್ವ ಶಕ್ತನು ನನ್ನ ಯಜಮಾನ
ಮರಣ ಜಯಿಸಿದ ನನ್ನ ಮದಲಿಂಗನು
ಆಹಾ ಹಾ ಇದು ಅತಿಶಯ ತಾನೇ |
ಓ ಹೊಹೊ ಇದು ನಿಜವಲ್ಲವೇ ||2||

ಪರಲೋಕದೊಳ್ ನನ್ನ ಹೆಸರು
ಬರೆದಿರುವ ನನ್ನೇಸು ||2||
ನನ್ ಬಾಳಿನ ಗುರಿಯೊಂದೆ |
ಯೇಸುವಿಗಾಗಿ ಬಾಳುವುದೆ ||2||

ಸರ್ವ ಶಕ್ತನು ನನ್ನ ಸ್ವಂತವಾದನು
ಮರಣ ಗೆದ್ದನು ನನ್ನ ಜೀವರಾಜನು
ಸರ್ವ ಶಕ್ತನು ನನ್ನ ಯಜಮಾನ
ಮರಣ ಜಯಿಸಿದ ನನ್ನ ಮದಲಿಂಗನು
ಆಹಾ ಹಾ ಇದು ಅತಿಶಯ ತಾನೇ |
ಓ ಹೊಹೊ ಇದು ನಿಜವಲ್ಲವೇ ||2||

ಊರಿಗೆಲ್ಲಾ ಹೇಳುವೆನು
ಜಗಕೆಲ್ಲ ಸಾರುವೆನು ||2||
ಜೀವಿಸುವ ನನ್ನೇಸು
ಶೀಘ್ರವಾಗಿ ಬರುವಾನು ||2||

ಸರ್ವ ಶಕ್ತನು ನನ್ನ ಸ್ವಂತವಾದನು
ಮರಣ ಗೆದ್ದನು ನನ್ನ ಜೀವರಾಜನು
ಸರ್ವ ಶಕ್ತನು ನನ್ನ ಯಜಮಾನ
ಮರಣ ಜಯಿಸಿದ ನನ್ನ ಮದಲಿಂಗನು
ಆಹಾ ಹಾ ಇದು ಅತಿಶಯ ತಾನೇ |
ಓ ಹೊಹೊ ಇದು ನಿಜವಲ್ಲವೇ ||2||