ಸಾರಿರಿ...,ಸಾರಿರಿ ಜಗವೆಲ್ಲ, ಪ್ರೀತಿಯನ್ನು
ಸಾರಿರಿ ಪ್ರೇಮವನ್ನು ಸಾರಿರಿ,...
|| ಸಾರಿರಿ ಜಗವೆಲ್ಲ||
ದೇವರು ತಂದ ಭಾಗ್ಯವಿದು ಈ
ಲೋಕವು ಏಳಿಗೆ ಹೊಂದುವುದು
ಮಾನವ ರೂಪವ ತಾಳಿದನು
ಯೇಸು ಮಾನವ ರೂಪವ ತಾಳಿದನು
ಸಾರಿರಿ...,ಸಾರಿರಿ ಜಗವೆಲ್ಲ, ಪ್ರೀತಿಯನ್ನು
ಸಾರಿರಿ ಪ್ರೇಮವನ್ನು ಸಾರಿರಿ,...
ಕಲಹ ಹಗೆಯನೆ ಕಂಡೆವು, ನಾವು
ಇಹದಿ ಜೀವಿಸ ಮರೆತೆವು
ದೇವರ ಸ್ತುತಿಸಲು ಮರೆತಿಲ್ಲ
ಆ ಪ್ರೀತಿಯ ನಾವಿಂದು ಅರಿತಿಲ್ಲ
ಸಾರಿರಿ...,ಸಾರಿರಿ ಜಗವೆಲ್ಲ, ಪ್ರೀತಿಯನ್ನು
ಸಾರಿರಿ ಪ್ರೇಮವನ್ನು ಸಾರಿರಿ,...