ಸಾವಿರ ಸಾವಿರ ಶುಭವು
ಅನುದಿನ ನನ್ನಾವರಿಸಲು
ಕೃಪೆಯು ಕರುಣೆ ಪ್ರೀತಿಯ ತೋರಿರುವೆ (2)
ಒಳ್ಳೆ ಎಬಿನೇಜರಾಗಿ
ನನ್ನ ನಡೆಸುತ್ತಲಿರುವೆ
ವಂದಿಸಲು ಮಾತು ಇಲ್ಲವೇ (2)
ಹಗಲು ಇರಳು ಎಲ್ಲ ಸಮಯಗಳಲ್ಲಿ ನನ್ನ
ನಡೆಸುವ ನಿನ್ ಕರಗಳ ನಾ ಕಂಡೆ
ಅಗತ್ಯ ಹೆಚ್ಚುವಾಗ ಸಿಲುಕಿಕೊಳ್ಳದೆ ನಾ
ಸಹಾಯ ಮಾಡುವ ಕರಗಳ ನಾ ಕಂಡೆ
ಎಲ್ಲ ಇಕ್ಕಟ್ಟಿನಲ್ಲೂ ನಾ ಬೀಳದೆ ಕಾಯುವ
ಒಳ್ಳೆ ಪ್ರಿಯ ಕರ್ತನೆ (2) | (ಸಾವಿರ ಸಾವಿರ ಶುಭವು)
ಮರಣ ಹಾದಿಯಲ್ಲಿ ನಾನು ನಡೆಯುವಾಗ
ಕಾಪಾಡುವ ನಿನ್ನ ಕರಗಳ ನಾ ಕಂಡೆ
ಒಣಗಿ ಇದ್ದ ಸಮಯ ಸಾಯದಂತೆ ನನ್ನ
ಹೊರುವ ನಿನ್ನ ಕರಗಳ ನಾ ಕಂಡೆ
ನನ್ನ ಮಾರಾದ ಜೀವಿತವ ಮಧುರವಾಗಿ ಮಾರ್ಪಡಿಸುವ
ಒಳ್ಳೆ ಪ್ರಿಯ ಕರ್ತನೆ (2) | (ಸಾವಿರ ಸಾವಿರ ಶುಭವು)