Index Page

ರಾತ್ರಿ ಇಲ್ಲಾ ಹಗಲಿಲ್ಲಾ

ರಾತ್ರಿ ಇಲ್ಲಾ ಹಗಲಿಲ್ಲಾ ಯೇಸುವಿನ ರಾಜ್ಯದಲ್ಲಿ
ನೀತಿರಾಜನು ಇರುವಲ್ಲಿ ನಿತ್ಯ ಬೆಳಕು ಕಾಣುವೆನು ||2||
ಚಿಂತೆ ಇಲ್ಲಾ ನೋವಿಲ್ಲ ಯೇಸುವಿನ ರಾಜ್ಯದಲ್ಲಿ ||2||

ಆನಂದವೇ ಆಶ್ಚರ್ಯವೇ ಆನಂದವೆ ಪರಮಾನಂದವೆ
ಅತಿಶಯವೇ ಅಭಿಷೇಕವೇ ಆನಂದವೇ ಪರಮಾನಂದವೇ ||2||

1. ಬಂಗಾರ ಬೀದಿಯಲ್ಲಿ ಕುಣಿಯುತ್ತಾ ನಲಿಯುವೆ ನಾ
ದೈವಜನರೊಂದಿಗೆ ಕ್ರಿಸ್ತನ ಸ್ತುತಿಸುವೆ ನಾ ||2||
ನನ್ನಯ ನೀತಿಯ ರಾಜನ ಮಹಿಮೆಯ ಮುಖವನು ಕಾಣುವೆನು ||2||

ಆನಂದವೇ ಆಶ್ಚರ್ಯವೇ ಆನಂದವೆ ಪರಮಾನಂದವೆ
ಅತಿಶಯವೇ ಅಭಿಷೇಕವೇ ಆನಂದವೇ ಪರಮಾನಂದವೇ ||2||

ರಾತ್ರಿ ಇಲ್ಲಾ ಹಗಲಿಲ್ಲಾ ಯೇಸುವಿನ ರಾಜ್ಯದಲ್ಲಿ
ನೀತಿರಾಜನು ಇರುವಲ್ಲಿ ನಿತ್ಯ ಬೆಳಕು ಕಾಣುವೆನು ||2||

2. ಪರಿಶುದ್ದ ಪಟ್ಟಣದಿ ಹಾಡುತ್ತಾ ಹರ್ಷಿಸುವೇ
ಜೀವಜಲವನ್ನು ಕ್ರಯವಿಲ್ಲದೆ ಕುಡಿಯುವೆ ನಾ ||2||
ಜೀವಭಾದ್ಯರ ಪಟ್ಟಿಯಲ್ಲಿ ನನ್ನಯ ಹೆಸರನ್ನು ಕಾಣುವೆನು||2||