ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು ನಿಜವು ಇದನ್ನು ನೀ ನಂಬು ಇದು ಈ ಭೂಮಿ ಕೊಡಲಾರದು
ಎಂದೆಂದಿಗೂ ಬಿಡಲಾರದು
1. ನನ್ನೇಸುವಿನ ದಿವ್ಯ ಪ್ರೇಮವು ಒಣ ಮರವಾಗಿ ಉಳಿದು ಹೋಗೈದು ಬೆಳಕು ನೀಡಿ ಆರಿ ಹೋಗೈದು
ನನ್ನೇಸುವಿನ ನಿತ್ಯ ಪ್ರೇಮ ತಂದೆ ತಾಯಿಗಳ ಪ್ರೇಮವು ನೆರಳಿನಂತೆ ಗತಿಸಿ ಹೋಗೈದು
ಹೆತ್ತಮಕ್ಕಳ ಪ್ರೇಮವು ಕನಸಿನಂತೆ ಕರಗಿ ಹೋಗೈದು ಎಂದೆಂದಿಗೂ ಬದಲಾಗದು
ಪತಿ ಪತ್ನಿಯರ ಪ್ರೇಮವು ಅರಳಿದಂತೆ ಪ್ರೇಮ ಪುಷ್ಪವು ಬಾಡಿ ಬೀಳ್ತದು ಕ್ಷಣದಲಿ
ಬಂಧುಮಿತ್ರರ ಮಧ್ಯದಲ್ಲಿ ,
ಬೆಳಗುತ್ತಿರುವ ಪ್ರೇಮ ದೀಪವು ಎಣ್ಣೆಯಿರುವ ಗಳಿಗೆ ಮಾತ್ರವೆ
ಧರಣಿಯ ಪ್ರೇಮವೆಲ್ಲವು ಸ್ಥಿರವಿಲ್ಲದೆ ಕರಗಿ ಹೋಗೈದು
ಕಿಸ್ತೇಸುವಿನ ಕಲ್ಯಾರಿ ಪ್ರೇಮ ಕಡೆಯವರೆಗೂ ಆಧರಿಸುವುದು