ಪರಿಶುದ್ಧರೋಳ್ ಅತಿ ಪರಿಶುದ್ಧನೇ

ಪರಿಶುದ್ಧರೋಳ್ ಅತಿ ಪರಿಶುದ್ಧನೇ
ನಿನ್ನನ್ನೇ ಹೊಗಳಿ ಕೊಂಡಾಡುವೇ
ಈ ಲೋಕದಲ್ಲಿ ಬೇರೆ ಯಾರು ಇಲ್ಲ
ನಿನ್ನ ನಾಮವನ್ನೇ ಸ್ತುತಿ ಹಾಡುವೆ

ಶಿಷ್ಯರ ಕಾಲ್ಗಳ ತೊಳೆದವನೇ
ರಕ್ತದಿ ನನ್ನನ್ನು ತೊಳೆಯುವನೇ
ಈ ಲೋಕದಲ್ಲಿ ಬೇರೆ ಯಾರು ಇಲ್ಲ
ನಿನ್ನ ನಾಮವನ್ನೇ ಸ್ತುತಿ ಹಾಡುವೆ

ರೋಗಿಗಳ ರೋಗವೆಲ್ಲ ನೀಗಿಸುವ
ಪಾಪಿಗಳ ಪಾಪವೆಲ್ಲಾ ಕ್ಷಮಿಸುವನು
ಈ ಲೋಕದಲ್ಲಿ ಬೇರೆ ಯಾರು ಇಲ್ಲ
ನಿನ್ನ ನಾಮವನ್ನೇ ಸ್ತುತಿ ಹಾಡುವೆ

ನಿನ್ ಜೀವ ನನಗಾಗಿ ಕೊಟ್ಟವನೇ
ನನ್ ಜೀವ ಸಂಪೂರ್ಣ ಅರ್ಪಿಸುವೇ
ಈ ಲೋಕದಲ್ಲಿ ಬೇರೆ ಯಾರು ಇಲ್ಲ
ನಿನ್ನ ನಾಮವನ್ನೇ ಸ್ತುತಿ ಹಾಡುವೆ

ಪರಲೋಕದೋಳ್ ನನ್ನ ಸೇರಿಸುವನೇ
ಪರಿಶುದ್ಧನಾಗಿ ನಾ ಕಾದಿರುವೆ
ಈ ಲೋಕದಲ್ಲಿ ಬೇರೆ ಯಾರು ಇಲ್ಲ
ನಿನ್ನ ನಾಮವನ್ನೇ ಸ್ತುತಿ ಹಾಡುವೆ