ಒಂದು ಊರಿನಲ್ಲಿ ಒಂದು ಬೆಳಕು

ಒಂದು ಊರಿನಲ್ಲಿ ಒಂದು ಬೆಳಕು
ಅಂಧಕಾರದಲ್ಲಿ ತೋರಲಾಯಿತು;
ಬೆತ್ತೆಹೇಮಿನಲ್ಲಿ ನೀತಿಸೂರ್ಯನು
ಪಾಪಕತ್ತಲಲ್ಲಿ ಕಾಂತಿಕೊಟ್ಟನು.

ಈಗ ನರರಲ್ಲಿ ದಿವ್ಯ ಕೃಪೆಯು
ಎಲ್ಲಾ ಭೂಮಿಯಲ್ಲಿ ದೊಡ್ಡದಾಯಿತು;
ಈಗ ಶುದ್ಧ ನೀತಿ ಒಳ್ಳೇ ಸುಖವು.
ಸತ್ಯವಾದ ಪ್ರೀತಿ ನೆಲೆಗೊಂಡವು.

ಬೆಲ್ಲೆಹೇಮಿನಲ್ಲಿ ಯೇಸುಸ್ವಾಮಿಯು
ನರರೂಪದಲ್ಲಿ ಹುಟ್ಟಿದಾಗಲು
ಜೀವದ ಪ್ರಕಾಶ ಪ್ರಭೆ ಕೊಟ್ಟಿತು.
ಮೃತ್ಯು ಕ್ರೂರ ಪಾಶ ಬಿಟ್ಟು ಹೋಯಿತು.

ಒಂದು ಊರಿನಲ್ಲಿ ಒಂದು ಬೆಳಕು
ಅಂಧಕಾರದಲ್ಲಿ ತೋರಲಾಯಿತು;
ಬೆತ್ತೆಹೇಮಿನಲ್ಲಿ ನೀತಿಸೂರ್ಯನು
ಪಾಪಕತ್ತಲಲ್ಲಿ ಕಾಂತಿಕೊಟ್ಟನು.