ಒಂದಾಗಿ ಸ್ತೋತ್ರ ಮಾಡಿರೀ
ಶುಭವಾರ್ತೆಯನ್ನು ಕೇಳಿರಿ
ತಂದೆಯೂ ಮೆಚ್ಚಿದ ರಕ್ಷಕ ಹುಟ್ಟಿದ
ಸಂತೋಷದಿಂದ ಹಾಡಿರಿ.
ರಾತ್ರಿಯ ಕಾಲದಿ ದೂತರು
ಕುರುಬರ್ಗೆ ವಾರ್ತೆಯ ತಂದರು
ನರ ರೂಪ ತಾಳಿದ ಕರ್ತನ
ಕಂಡು ತಲೆಬಾಗಿರಿ ಅಂದರು (2)
ಒಂದಾಗಿ ಸ್ತೋತ್ರ ಮಾಡಿರೀ
ಶುಭವಾರ್ತೆಯನ್ನು ಕೇಳಿರಿ
ತಂದೆಯೂ ಮೆಚ್ಚಿದ ರಕ್ಷಕ ಹುಟ್ಟಿದ
ಸಂತೋಷದಿಂದ ಹಾಡಿರಿ.
ಮುಕ್ತಿಯ ಮಾರ್ಗವ ತೋರಿದ
ಮೆಸ್ಸೀಯ ಹಟ್ಟೀಲಿ ಹುಟ್ಟಿದ
ಪರಲೋಕ ಘನಮಾನ ತೊರೆದನು
ರಾಜಾಧಿರಾಜನಾದ ಕ್ರಿಸ್ತನು (2)
ಒಂದಾಗಿ ಸ್ತೋತ್ರ ಮಾಡಿರೀ
ಶುಭವಾರ್ತೆಯನ್ನು ಕೇಳಿರಿ
ತಂದೆಯೂ ಮೆಚ್ಚಿದ ರಕ್ಷಕ ಹುಟ್ಟಿದ
ಸಂತೋಷದಿಂದ ಹಾಡಿರಿ.
ಲೋಕದಿ ಜನಿಸಿದ ಆತಗೆ
ಸ್ವಾಗತ ಬಯಸುವ ಮನುಜರೇ
ಹೃದಯವ ಶುದ್ಧಿಸೋ ಕಾರ್ಯಕೆ
ಬಾಗಿಲ ತೆರೆಯುವ ಹರ್ಷದಿಂ (2)