ಓ ಎಂಥಾ ಅದ್ಭುತವೇ ದೈವಾವತರವಿದೇ
ಲೋಕಕ್ಕೆ ಬಂದಾತನೆ ನೀ ಕರ್ತ ಕ್ರಿಸ್ತೇಸುವೇ
ದೈವ ಪದವಿಯನ್ನು ತ್ಯಜಿಸಿ
ದಾಸನ ರೂಪ ನೀ ಧರಿಸಿ
ಸೇವಕನೇ ತಗ್ಗಿಕೊಂಡೆ ಮರಣವ ನೀ ಹೊಂದಿಹೆ
ಓ ಎಂಥಾ ಅದ್ಭುತವೇ ದೈವಾವತರವಿದೇ
ಲೋಕಕ್ಕೆ ಬಂದಾತನೆ ನೀ ಕರ್ತ ಕ್ರಿಸ್ತೇಸುವೇ
ನೀನಿಲ್ಲದೆ ನಾನೆಲ್ಲಿಗೆ
ಹೋಗೋದು ಹೇಗೆನಾ ಮುಂದಕೆ
ಸನ್ಮಾರ್ಗವ ತೋರೆನಗೆ ನೀ ಬಾರದೆ ನಾ ನಡೆಯೆ
ಓ ಎಂಥಾ ಅದ್ಭುತವೇ ದೈವಾವತರವಿದೇ
ಲೋಕಕ್ಕೆ ಬಂದಾತನೆ ನೀ ಕರ್ತ ಕ್ರಿಸ್ತೇಸುವೇ
ನಿಸ್ವಾರ್ಥ ಸ್ನೇಹ, ನಿಸ್ಸೀಮ ಪ್ರೇಮ
ಸ್ವರ್ಗೀಯ ಜ್ಞಾನ ನೀನೊಬ್ಬನೇ
ಕ್ರಿಸ್ತೇಸುವೇ ನಾ ಕೇಳುವೆ ನಿನ್ನ ಕೃಪೆ ಬೇಕೆನಗೆ
ಓ ಎಂಥಾ ಅದ್ಭುತವೇ ದೈವಾವತರವಿದೇ
ಲೋಕಕ್ಕೆ ಬಂದಾತನೆ ನೀ ಕರ್ತ ಕ್ರಿಸ್ತೇಸುವೇ
ದೀನಾತ್ಮ ನೀನೇ ಪ್ರೇಮಾಗ್ನಿ ನೀನೇ
ಸ್ನೇಹದ ಆಳ ನಾ ಕಾಣೆನೇ
ಸರ್ವೇಶ್ವರಾ ಉಧ್ಧಾರಕ ಎನ್ನೊಡೆಯ ಎನ್ತಾರಕ