Index Page

ನಿನ್ನಂತೆ ಯಾರಿಲ್ಲ

ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರಿಲ್ಲ
ನೀನೇ ನನಗೆಲ್ಲ ನನಗ್ಯಾವ ಭಯವಿಲ್ಲ||2||
ಹಲ್ಲೆಲೂಯಾ ||4|| ನಿಮಗೆ ಸ್ತೋತ್ರ ||4||
ನಿನ್ನಂತೆ ಯಾರಿಲ್ಲ..

ನಾನು ನಂಬಿದಾತನೇ ನೀನೇ ನಂಬಿಗಸ್ತನೇ
ನಂಬಿಕೆಯ ಹುಟ್ಟಿಸಿ ಪೂರೈಸುವಾತನೇ||2||
ನಂಬಿಗಸ್ತನೇ||2||
ನಾನು ನಂಬಿದಾತನೇ ನೀನೇ ನಂಬಿಗಸ್ತನೇ
ನಂಬಿಕೆಯ ಹುಟ್ಟಿಸಿ ಪೂರೈಸುವಾತನೇ
ಹಲ್ಲೆಲೂಯಾ…

ಓ ಕೃಪಾಪೂರ್ಣನೇ ಮನಮರುಗುವಾತನೇ
ನನ್ನ ಜೊತೆಗಾರನೇ ಇಮ್ಮಾನುವೇಲನೇ||2||
ಕೃಪಾಪೂರ್ಣನೇ ||2||
ಓ ಕೃಪಾಪೂರ್ಣನೇ ಮನಮರುಗುವಾತನೇ
ನನ್ನ ಜೊತೆಗಾರನೇ ಇಮ್ಮಾನುವೇಲನೇ
ಹಲ್ಲೆಲೂಯಾ…

ಮರಣಜಯಿಸಿದಾತನೇ ಜೀವಲೋಕದರಸನೇ
ಪುನರುತ್ಥಾನ ಜೀವವು ನೀನೇ ನನ್ನ ಯೇಸುವೇ||2||
ಜಯಿಸಿದಾತನೇ||2||
ಮರಣಜಯಿಸಿದಾತನೇ ಜೀವಲೋಕದರಸನೇ
ಪುನರುತ್ಥಾನ ಜೀವವು ನೀನೇ ನನ್ನ ಯೇಸುವೇ