ನಿನ್ನ ಸ್ತೋತ್ರ ಯೇಸುವೇ

ನಿನ್ನ ಸ್ತೋತ್ರ ಯೇಸುವೇ ಎಂದೂ ಹಾಡುವೆ
ಸದಾಕಾಲವೂ ಸ್ತುತಿಸುವೆನು

ನಿನ್ನ ಪ್ರೇಮಾನುಭವ ಜೀವಕ್ಕಿಂತ ಶ್ರೇಷ್ಠವು
ನನ್ನ ಬಾಯಿ ನಿನ್ನನ್ನು ಕೀರ್ತಿಸುವುದು
ನನ್ನ ಜೀವಮಾನವೆಲ್ಲಾ ಹಾಡಿ ಹರಸಿ
ನಿನ್ನ ಹೆಸರೆತ್ತಿ ಕೈ ಮುಗಿವೆ

ನಿನ್ನ ಸ್ತೋತ್ರ ಯೇಸುವೇ ಎಂದೂ ಹಾಡುವೆ
ಸದಾಕಾಲವೂ ಸ್ತುತಿಸುವೆನು

ನಿನ್ನ ಹೊರ್ತು ಇಲ್ಲವು ನನಗೆ ಆಶ್ರಯವು
ನಿನ್ನ ಮೇಲೆ ಮಾತ್ರವೇ ನಾನು ಆತುಕೊಳ್ಳುವೆ
ನಿನ್ನ ಹೊರ್ತು ಕರ್ತನೇ ಬೇರೆ ದಿಕ್ಕು ಕಾಣೆನು
ನಿನ್ನ ನಾಮ ಯೇಸುವೇ ಭದ್ರ ದುರ್ಗವು

Ninna stotra yesuve endu haduve
Sadakalavu stutisuvenu

Ninna premanubhava jivakkinta sresthavu
Nanna bayi ninnannu kirtisuvudu
Nanna jivamanavella hadi harasi
Ninna hesaretti kai mugive

Ninna stotra yesuve endu haduve
Sadakalavu stutisuvenu

Ninna hortu illavu nanage asrayavu
Ninna mele matrave nanu atukolluve
Ninna hortu kartane bere dikku kanenu
Ninna nama yesuve bhadra durgavu