ನಿನ್ನ ಪ್ರೀತಿಯಲ್ಲಿ ಲೀನನಾದೆ ನಾ

ನಿನ್ನ ಪ್ರೀತಿಯಲ್ಲಿ ಲೀನನಾದೆ ನಾ
ನಿನ್ನ ಬಾಹುವನ್ನು ಆತುಕೊಂಡೆ ನಾ

ಓ ಯೇಸುವೇ ನಿನ್ನ ಪ್ರೀತಿಗೆ
ಬದಲೆನು ನಾ ನೀಡಲಿ
ನನ್ನ ಪ್ರಾಣವ ನನ್ನ ದೇಹವ
ಸಮರ್ಪಿಸುತ ನಾ ಹಾಡುವೆ
ಕೋಮಲವಾದ ಆ ಕರಗಳು
ನನ್ನ ಪಾಪಕ್ಕೆ ಕುರೂಪವಾಯಿತು

ಆ ಕರಗಳೇ ಈ ಪಾಪಿಯ
ಅಪ್ಪಿಕೊಳ್ಳಲು ಸಿದ್ದವಾಯಿತು
ಸುಂದರವಾದ ಆ ಅದರವು
ನನ್ನ ದ್ರೋಹಕ್ಕೆ ಕುರೂಪವಾಯಿತು
ಆ ಅದರವೇ ಈ ಪಾಪಿಯ
ಚುಂಬಿಸುತ್ತಲೇ ಸ್ವೀಕರಿಸಿತು