ನೀವೆಷ್ಟು ಒಳ್ಳೆವ್ರಪ್ಪಾ ನಿನ್ ಪ್ರೀತಿ

ನೀವೆಷ್ಟು ಒಳ್ಳೆವ್ರಪ್ಪಾ ನಿನ್ ಪ್ರೀತಿ
ಹೇಗೇಳಲಪ್ಪ-2
ಈ ಹಾಡು ನಿನಗಾಗಿಯೇ ಹಾಡುವೆ ನನ್ನೇಸುವೆ-2

ನನ್ನ ಒಳ್ಳೆ ಪಾಲು ನೀ ಯೇಸಯ್ಯಾ ನಿನಗಿಂತ ದೇವರು ಬೇರಿಲ್ಲಯಾ-2
ನಿನ್ನ ಪಾದಕೆ ಮುದ್ದಿಡುವೆ ನಿನ್ನನ್ನೆ ಪ್ರೀತಿಸುವೆ-2
ಜೀವನವೆಲ್ಲಾ ನಿನಗಾಗಿ ಹಾಡಿ ಹೊಗಳುವೆ-2

ಈ ನನ್ನ ಜೀವ ನಿನ್ನದೇಸಯ್ಯಾ ಉಸಿರೆಲ್ಲಾ ನಿನ್ನದೆ ಓ ಯೇಸಯ್ಯಾ-2
ನೀನಿರದ ಒಂದು ಕ್ಷಣ ಬದುಕೆಲ್ಲಾ ಬರಿ ಶೂನ್ಯ-2
ನೀನಿರಲು ಬಾಳೆಲ್ಲಾ ಹರುಷಾನಂದ-2

ಪರಲೋಕವೆಲ್ಲಾ ನಿನ್ನದೇಸಯ್ಯಾ
ನಾನು ಕೂಡ ಅಲ್ಲಿಗೆ ಬರುವೇನಯ್ಯಾ-2
ಬೇಗನೆ ಬರಲಿರುವೆ ಕೈ ಹಿಡಿದು ಕರೆದೊಯ್ಯುವೆ-2
ಶಾಶ್ವತ ಸ್ಥಾನದಿ ನನ್ನನ್ನು ನೀನೇ ನಿಲ್ಲಿಸುವೆ-2

ನೀವೆಷ್ಟು ಒಳ್ಳೆವ್ರಪ್ಪಾ ನಿನ್ ಪ್ರೀತಿ
ಹೇಗೇಳಲಪ್ಪ-2
ಈ ಹಾಡು ನಿನಗಾಗಿಯೇ ಹಾಡುವೆ ನನ್ನೇಸುವೆ-2