ನಾನು ನಿನ್ನವ ಪ್ರೀಯ ಕರ್ತನೆ
ನಿನ್ನ ವಾಕ್ಯ ಕೇಳಿದೆ
ಇನ್ನು ಕೇವಲ ನಿನ್ನನ್ಯೋನ್ಯ ಕ್ಕೆ
ಸೇರೋದೆನ್ನ ಕೋರಿಕೆ
ಎಳೆ ನನ್ನ, ಎಳೆ ಪ್ರೀಯ ಕರ್ತನೇ
ನಿನ್ನ ಕ್ರೂಜೇ ಕಂಬಕೆ
ಎಳೆ ನನ್ನ, ಎಳೆ ಪ್ರೀಯ ಕರ್ತನೇ
ನಿನ್ನ ತಿವಿದೆದೆಗೆ
ನಿನ್ನ ಸೇವೆಗೆ, ಪ್ರೀಯ ರಕ್ಷಕ, ನೀ ಪ್ರತಿಷ್ಠಿಸೆನ್ನನ್ನು;
ದಯಪಾಲಿಸು ದೃಡ ನಿಶ್ಚಯ, ನಿನ್ನ ಚಿತ್ತ ನನ್ನದು.
ಎಳೆ ನನ್ನ, ಎಳೆ ಪ್ರೀಯ ಕರ್ತನೇ
ನಿನ್ನ ಕ್ರೂಜೇ ಕಂಬಕೆ
ಎಳೆ ನನ್ನ, ಎಳೆ ಪ್ರೀಯ ಕರ್ತನೇ
ನಿನ್ನ ತಿವಿದೆದೆಗೆ
ನಾನು ಓರಾಗಿ ನಿನ್ನ ಪಾದಕ್ಕೆ ಸುಸಂವಾದ ಮಾಡುತ
ನಿನ್ನ ಸಂಗಡ ಇರ್ವ ಗಳಿಗೆ ಎಂಥಾಮೂಲ್ಯ ಸಂತಸ!
ಎಳೆ ನನ್ನ, ಎಳೆ ಪ್ರೀಯ ಕರ್ತನೇ
ನಿನ್ನ ಕ್ರೂಜೇ ಕಂಬಕೆ
ಎಳೆ ನನ್ನ, ಎಳೆ ಪ್ರೀಯ ಕರ್ತನೇ
ನಿನ್ನ ತಿವಿದೆದೆಗೆ
ತಳವಿಲ್ಲದ ಪ್ರೀತಿಸಾಗರ ಬುದತೀತ ಹರ್ಷವೆ!
ನನಗಾಗಲು ನಿನ್ನ ದರ್ಶನ ನಿತ್ಯ ಸ್ತೋತ್ರ ನಿನಗೆ.
ಎಳೆ ನನ್ನ, ಎಳೆ ಪ್ರೀಯ ಕರ್ತನೇ
ನಿನ್ನ ಕ್ರೂಜೇ ಕಂಬಕೆ
ಎಳೆ ನನ್ನ, ಎಳೆ ಪ್ರೀಯ ಕರ್ತನೇ
ನಿನ್ನ ತಿವಿದೆದೆಗೆ