ನನ್ನನ್ನು ಪರೀಕ್ಷಿಸಿ

ನನ್ನನ್ನು ಪರೀಕ್ಷಿಸಿ
ಸಂಪೂರ್ಣ ತಿಳುಕೊಂಡಿದ್ದೀ
ನಾನ್ನಾಲೋಚನೆಯೆಲ್ಲವ
ಬಲ್ಲವನಾಗಿರುತ್ತಿ

ನಾ ನಿನ್ನ ಆತ್ಮಕ್ಕೆ ತಪ್ಪಿಸಿಕೊಳ್ಳಲು, ಎಲ್ಲಿಗೆ ಓಡಲಿ?
ನಾ ನಿನ್ನ ಕಣ್ಣಿಗೆ ಮರೆಯಾಗುವಂತೆ, ಎಲ್ಲಿಗೆ ಹೋಗಲಿ?
ಮೇಲಕ್ಕೆ ಏರಿ ಹೋದರು, ಅಲ್ಲಿಯೂ ನೀನಿರುತ್ತಿ
ಪಾತಾಳಕ್ಕಿಳಿದು ಮರೆಯಾದರೂ, ಅಲ್ಲಿಯೂ ನೀನಿರುತ್ತಿ.

ತಾಯಿಯ ಗರ್ಭದಲ್ಲಿ ನನ್ನನ್ನು, ರೂಪಿಸಿದವನು ನೀನೇ
ಅದ್ಭುತವಾಗಿ ವಿಚಿತ್ರವಾಗಿ, ನನ್ನನ್ನು ನಿರ್ಮಿಸಿದಿ
ಇಂಥ ನಿನ್ನ ಜ್ಞಾನವು, ಆಶ್ಚರ್ಯವಾಗಿದೆ
ಅದೆಷ್ಟು ಉನ್ನತವಾದದ್ದು, ನನಗೆ ನಿಲುಕದು

ನನ್ನನ್ನು ಪರೀಕ್ಷಿಸಿ
ಸಂಪೂರ್ಣ ತಿಳುಕೊಂಡಿದ್ದೀ
ನಾನ್ನಾಲೋಚನೆಯೆಲ್ಲವ
ಬಲ್ಲವನಾಗಿರುತ್ತಿ

ದೇವಾ ನನ್ನನ್ನು ಪರೀಕ್ಷಸಿ, ಹೃದಯವನ್ನು ತಿಳುಕೊಂಡಿದ್ದಿ
ನನ್ನಾಲೋಚನೆಗಳನ್ನೆಲ್ಲಾ, ನೀನೇ ಶೋಧಿಸು
ಕೇಡಿನ ಮಾರ್ಗದಿಂದಲೂ, ನನ್ನನ್ನು ತಪ್ಪಿಸಿ
ಸನಾತನ ಮಾರ್ಗದಲ್ಲಿ, ನನ್ನನ್ನು ನಡಿಸು.

ನನ್ನನ್ನು ಪರೀಕ್ಷಿಸಿ
ಸಂಪೂರ್ಣ ತಿಳುಕೊಂಡಿದ್ದೀ
ನಾನ್ನಾಲೋಚನೆಯೆಲ್ಲವ
ಬಲ್ಲವನಾಗಿರುತ್ತಿ