ನನ್ನ ಚಿತ್ತವಲ್ಲ ನಿನ್ನ ಚಿತ್ತ ದೇವಾ
ನಾನೇನು ಅಲ್ಲ ನೀನಾದೆ ಎಲ್ಲಾ
||ದಾಸನು ನಾನು ಈಶನು ನೀನೇ ದೇವಾ||
ಬಲಹೀನ ನಾನು ಶಕ್ತನು ನೀನೇ ದೇವಾ
ನನ್ನ ಚಿತ್ತವಲ್ಲ ನಿನ್ನ ಚಿತ್ತ ದೇವಾ
ನಾನೇನು ಅಲ್ಲ ನೀನಾದೆ ಎಲ್ಲಾ||
||ಬಾಳೆಂಬ ಹಡಗಿನ ನಾವಿಕ ನೀನಂತೆ ದೇವಾ||
ಅಲೆ ಬಂದು ಬಡೆದರೂ ಮುಳುಗದೆ ಸಾಗಿದೆ ದೇವಾ
ನನ್ನ ಚಿತ್ತವಲ್ಲ ನಿನ್ನ ಚಿತ್ತ ದೇವಾ
ನಾನೇನು ಅಲ್ಲ ನೀನಾದೆ ಎಲ್ಲಾ||
|| ನೀರಿನ ಮೇಲಿನ ಗುಳ್ಳೆಯು ನಾನಂತೆ ದೇವಾ ||ಮಣ್ಣಿಂದಾದ ಮನುಜ ನಾ ಮಣ್ಣಾಗಿ ಹೋಗುವೆ ದೇವಾ
ನನ್ನ ಚಿತ್ತವಲ್ಲ ನಿನ್ನ ಚಿತ್ತ ದೇವಾ
ನಾನೇನು ಅಲ್ಲ ನೀನಾದೆ ಎಲ್ಲಾ||