Index Page

ನಮ್ಮ ರಕ್ಷಕ ಇಂದು ಹುಟ್ಟಿದಾ

ನಮ್ಮ ರಕ್ಷಕ ಇಂದು ಹುಟ್ಟಿದಾ
ಹಲ್ಲೆಲುಯ ಹಾಡೋಣ
ನಮ್ಮ ರಕ್ಷಕನಿಂದ ಹುಟ್ಟಿದಾ
ಹಲ್ಲೆಲುಯ ಹಾಡೋಣ
||ಹಾ.. ಹಲ್ಲೆಲುಯಾ||

ಮೇಲಣ ಲೋಕದಿ ದೇವಗೆ ಮಹಿಮೆ
ಭೂಮಿಯ ಜನರೊಳು ಸಮಾಧಾನ
ಎಂದು ಧೂತರು ಸರಿ ಹೇಳಿದರು
ಸರ್ವರಿಗೆ ಶುಭವಾರ್ತೆ

ನಮ್ಮ ರಕ್ಷಕ ಇಂದು ಹುಟ್ಟಿದಾ
ಹಲ್ಲೆಲುಯ ಹಾಡೋಣ
ನಮ್ಮ ರಕ್ಷಕನಿಂದ ಹುಟ್ಟಿದಾ
ಹಲ್ಲೆಲುಯ ಹಾಡೋಣ

ಕುರುಬರು ಹೋಗಿ ಬೇತ್ಲೆಹೇಮಿಗೆ
ಕೂಸನ್ನು ಕಂಡು ನಮಿಸಿದರು
ದೂತರು ಹೇಳಿದ ಗುರುತನ್ನು
ಕಂಡು ದೇವನ ಸ್ತುತಿಸಿದರು

ನಮ್ಮ ರಕ್ಷಕ ಇಂದು ಹುಟ್ಟಿದಾ
ಹಲ್ಲೆಲುಯ ಹಾಡೋಣ
ನಮ್ಮ ರಕ್ಷಕನಿಂದ ಹುಟ್ಟಿದಾ
ಹಲ್ಲೆಲುಯ ಹಾಡೋಣ
||ಹಾ.. ಹಲ್ಲೆಲುಯಾ||