ನಕ್ಷತ್ರ ಮೂಡಿತು

ನಕ್ಷತ್ರ ಮೂಡಿತು ಬಾನಿನಲ್ಲಿಯೆ
ಶಾಸ್ತ್ರಗಳು ತೆರೆದವು ರಾತ್ರಿಯಲ್ಲಿಯೇ
ಏನದು ಎಂತದು ಏನದು ?--(2)
ಮೆಸ್ಸಿಯನು ಆತ ಮೆಸ್ಸಿಯನು
ಇಂದು ಜನಿಸಿದನು ಬೆತ್ಲೆಹೇಮಿನಲ್ಲಿಯೇ --(2)

ಮೂಡಣದ ಜೋಯಿಸರು ಬೆತ್ಲೆಹೇಮಿಗೆ
ಚಿನ್ನ ಧೂಪ ರಕ್ತಬೋಳ ಕಾಣಿಕೆಯೊಡನೆ
ಬಂದರು ಕಂಡರು ಯಾರನು?--(2)
ಮೆಸ್ಸಿಯನು ಆತ ಮೆಸ್ಸಿಯನು
ಇಂದು ಜನಿಸಿದನು ಬೆತ್ಲೆಹೇಮಿನಲ್ಲಿಯೇ--(2)

ಧೂತಗಣ ಕಾಣಿಸಿತು ಬಾನಿನಲ್ಲಿಯೆ
ಸಾರಿದರು ಶುಭವಾರ್ತೆ ಕುರುಬ ವೃಂದಕೆ
ಏನದು ಎಂತದು ಏನದು ?--(2)
ಮೆಸ್ಸಿಯನು ಆತ ಮೆಸ್ಸಿಯನು
ಇಂದು ಜನಿಸಿದನು ಬೆತ್ಲೆಹೇಮಿನಲ್ಲಿಯೇ--(2)