Index Page

ನಾವು ಇಲ್ಲಿ ಯಾತ್ರಿಕರು

ನಾವು ಇಲ್ಲಿ ಯಾತ್ರಿಕರು
ಚಿಯೋನಿಗೆ ಹೋಗುವೆವು
ಯೇಸು ತಾನೇ ಮುಂದೆ ಹೋಗುವ
ಸ್ವರ್ಗ ಸೇರೋವರೆಗೂ

ಸ್ವರ್ಗ ಮಹಿಮೆಯಲ್ಲಿ
ನಾವು ಸೇರಿದಾಗ ಎಷ್ಟಾನಂದವು
ಆಗ ಯೇಸುವ ನೋಡಿ
ಮಹಾನಂದದಿಂದ ಹಾಡುವೆವು

ಯಾತ್ರೆ ಉದ್ದವಾಗಿದ್ದಾಗ್ಯೂ
ಹರ್ಷದಿಂದ ಸಾಗುವೆವು
ಇಕ್ಕಟ್ಟಾದ ಮಾರ್ಗದಿಂದ
ಮುಂದೆ ಸಾಗಿ ಹೋಗುವ

ಸ್ವರ್ಗ ಮಹಿಮೆಯಲ್ಲಿ
ನಾವು ಸೇರಿದಾಗ ಎಷ್ಟಾನಂದವು
ಆಗ ಯೇಸುವ ನೋಡಿ
ಮಹಾನಂದದಿಂದ ಹಾಡುವೆವು

ಭಯ ಹುಟ್ಟಿಸುವ ಸುದ್ದಿ
ನಾವು ಕೇಳುವಾಗಲೂ
ಸ್ಥಿರ ಚಿತ್ತದಿಂದ ನಾವು
ಚಿಯೋನ ಯಾತ್ರೆ ಮಾಡುವ

ಸ್ವರ್ಗ ಮಹಿಮೆಯಲ್ಲಿ
ನಾವು ಸೇರಿದಾಗ ಎಷ್ಟಾನಂದವು
ಆಗ ಯೇಸುವ ನೋಡಿ
ಮಹಾನಂದದಿಂದ ಹಾಡುವೆವು