ನಾನು ಯೇಸುವಿನಲ್ಲಿ

ನಾನು ಯೇಸುವಿನಲ್ಲಿ ನಿಶ್ಚಿಂತೆಯಿಂದಿರುವೆ
ಆತನ ಪಕ್ಕಗಳಲ್ಲಿ ಮರೆಯಾಗಿ ನಿಂತಿರುವೆ (೨)
ರಕ್ಷಕ, ರಕ್ಷಕನೇ, ನಿನ್ನಲಿ ಮನಸ್ಸಿಟ್ಟಿದೆ
ರಕ್ಷಕನೇ ರಕ್ಷಕನೇ, ನಿನ್ನಲ್ಲಿ ಮನಸ್ಸಿಟ್ಟಿದೆ (೨)

ಶೋಧನೆ ಆಗುತ್ತಲೇ, ಕೇಡುಗಳು ಸಮಿಪಿಸುತ್ತಲೇ
ನಾನೇತಕ್ಕಂಜುವೆನು ಗುರಾಣಿಮುಂದಿರುವನು (೨)

ನಾನು ಯೇಸುವಿನಲ್ಲಿ ನಿಶ್ಚಿಂತೆಯಿಂದಿರುವೆ
ಆತನ ಪಕ್ಕಗಳಲ್ಲಿ ಮರೆಯಾಗಿ ನಿಂತಿರುವೆ (೨)

ನಿನ್ ಧ್ಯಾನ ಮಾಡುತ್ತಲೇ, ಭರವಸದಿಂದಿರುತ್ತಲೇ
ನಿನ್ ವಾಕ್ಯವೂ ಸತ್ಯ, ನಿನ್ ರಾಜ್ಯವೂ ನಿತ್ಯ (೨)

ನಾನು ಯೇಸುವಿನಲ್ಲಿ ನಿಶ್ಚಿಂತೆಯಿಂದಿರುವೆ
ಆತನ ಪಕ್ಕಗಳಲ್ಲಿ ಮರೆಯಾಗಿ ನಿಂತಿರುವೆ (೨)
ರಕ್ಷಕ, ರಕ್ಷಕನೇ, ನಿನ್ನಲಿ ಮನಸ್ಸಿಟ್ಟಿದೆ
ರಕ್ಷಕನೇ ರಕ್ಷಕನೇ, ನಿನ್ನಲ್ಲಿ ಮನಸ್ಸಿಟ್ಟಿದೆ