ನಾನು ನಿನ್ನನೇ ಬಯಸುತ್ತಾ ಬಂದಿಹೆನು

ನಾನು ನಿನ್ನನ್ನೇ ಬಯಸುತ್ತಾ ಬಂದಿಹೆನು
ನೀನೆ ನನ್ನಾ ಪ್ರಾಣವೂ
ನಿನ್ನ ದರ್ಶನವ ಕಾಣಲೂ
ನಿನ್ನನ್ನೇ ಬಯಸುವೆನು (೨)

ಆಮೆನ್ ಹಲ್ಲೆಲ್ಲೂಯಾಂ ಎಂದು ಹಾಡುತ್ತಾ
ನಿನ್ನನ್ನೇ ಸ್ತುತಿಸುವೆನು (೨)

ನಿನ್ನ ಕರೆಯುವ ಎಲ್ಲಾ ಜನರಿಗೆ
ಉತ್ತರ ಕೊಡುವೆನೆಂದೆ
ನಿನ್ನ ಸದುತ್ತರವ ದಯಪಾಲಿಸು
ನಾನಿಂದು ಪ್ರಾರ್ಥ್ತಿಸುವೆ (೨)

ಆಮೆನ್ ಹಲ್ಲೆಲ್ಲೂಯಾಂ ಎಂದು ಹಾಡುತ್ತಾ
ನಿನ್ನನ್ನೇ ಸ್ತುತಿಸುವೆನು (೨)

ನಿನಗಾಗಿ ಕಾಯುವ ಜನರಿಗೆ
ಹದ್ದಿನಂತೆ ಯೌವನವ
ನೀಡುವೆನೆಂದ ಮಾತನ್ನು
ನನಗೆ ನೆರವೇರಿಸು (೨)

ಆಮೆನ್ ಹಲ್ಲೆಲ್ಲೂಯಾಂ ಎಂದು ಹಾಡುತ್ತಾ
ನಿನ್ನನ್ನೇ ಸ್ತುತಿಸುವೆನು (೨)