ನಾ ಸ್ತುತಿಸುವೆನು ನಾನು ಭಜಿಸುವೆನು
ಕರ್ತನ ನಾಮಕ್ಕೆ ಮಹಿಮೆಯನು
ಸಲ್ಲಿಸಿ ಎಂದು ನಮಿಸುವೆನು
ಸ್ತೋತ್ರಕ್ಕೆ ಆತನೇ ಯೋಗ್ಯನು
			
				ಆತನ ಕೃಪೆ ಪ್ರೀತಿ ಕರುಣೆಗಳ
ವರ್ಣಿಸಲೆಂದಿಗೂ ಅಸಾಧ್ಯವು
ಪಾಪಿಯಾದೆನ್ನನ್ನು ರಕ್ಷಿಸಲೆಂದು
ತೋರಿದ ಪ್ರೇಮವು ಅಪಾರವು
			
				ನಾ ಸ್ತುತಿಸುವೆನು ನಾನು ಭಜಿಸುವೆನು
ಕರ್ತನ ನಾಮಕ್ಕೆ ಮಹಿಮೆಯನು
ಸಲ್ಲಿಸಿ ಎಂದು ನಮಿಸುವೆನು
ಸ್ತೋತ್ರಕ್ಕೆ ಆತನೇ ಯೋಗ್ಯನು
			
				ಕರ್ತನ ನಂಬಿದ ದಿನದಿಂದಲೂ
ಮಾಡಿದ ಉಪಕಾರಗಳೆಲ್ಲವನ್ನೂ
ಯೋಚಿಸಲೆನ್ನಯ ಹೃದಯವೆಲ್ಲ
ಕೃತಜ್ಞತೆಯಿಂದ ತುಂಬುವುದು
			
				ನಾ ಸ್ತುತಿಸುವೆನು ನಾನು ಭಜಿಸುವೆನು
ಕರ್ತನ ನಾಮಕ್ಕೆ ಮಹಿಮೆಯನು
ಸಲ್ಲಿಸಿ ಎಂದು ನಮಿಸುವೆನು
ಸ್ತೋತ್ರಕ್ಕೆ ಆತನೇ ಯೋಗ್ಯನು
			
				ಆತನಿರುವನ್ನೆ ನಾಸೇರಲು 
ಕಾತುರದಿಂದಲೆ ಕಾದಿಹೆನು
ಕರ್ತನ ನಾಮಕ್ಕೆ ಜಯಜಯವೆಂದು 
ಆರ್ಭಟಿಸಿ ನಾವು ಹಾಡುವೆವು