ಮುಟ್ಟು ಯೇಸಪ್ಪ ನನ್ನ ಮುಟ್ಟು ಯೇಸಪ್ಪ
ಅಪ್ಪ ಯೇಸಪ್ಪ ನನ್ನ ಮುಟ್ಟು ಯೇಸಪ್ಪ
ಕುರುಡ ಬಾರ್ತಿಮ ಕೂಗಿ ಕರೆದನು ನಿನ್ನನು ಯೇಸಪ್ಪ
ನೀನು ಮುಟ್ಟಲು ಕಣ್ಣು ಬಂದವು ಅವನಿಗೆ ಯೇಸಪ್ಪ
ಕುಷ್ಟರೋಗಿಯು ಬೇಡಿಕೊಂಡನು ನಿನ್ನನು ಯೇಸಪ್ಪ
ನೀನು ಮುಟ್ಟಲು ಕುಷ್ಟ ಹೋಯಿತು ಶುದ್ಧನಾದನಪ್ಪ
ಸತ್ತು ಹೋಗಿದ್ದ ಯೌವನಸ್ತನು ಬದುಕಿದ ಯೇಸಪ್ಪ
ಚಟ್ಟ ಮುಟ್ಟಲು ಎದ್ದು ಕೂತನು ನಿನ್ನಿಂದ ಯೇಸಪ್ಪ
ರಕ್ತ ಕುಸುಮ ರೋಗ ಹೊಂದಿರುವ ಹೆಂಗಸು ಯೇಸಪ್ಪ
ನಂಬಿಕೆಯಿಂದ ಉಡುಪನು ಮುಟ್ಟಿ ಸ್ವಸ್ಥಳಾದಳಪ್ಪ
ನನ್ನ ಹೃದಯವ ನನ್ನ ಜೀವಿತವ ಮುಟ್ಟು ಯೇಸಪ್ಪ
ನೀನು ಮುಟ್ಟಲು ಧನ್ಯವಾಗುವುದು ಬಾಳು ಯೇಸಪ್ಪ