ಮನದಲ್ಲಿ ಭಯವೇತಕೆ
ಎಂದೆದು ಕಾಪಾಡುವೆ
ನಾನೇ ಜೀವ ಮಾರ್ಗ ಸತ್ಯ
ಎಂದು ನೀ ಅರಿತಿಲ್ಲವೇ
ಸಮ್ಮುಖದಿ ಇಂದು ಚಿಂತೆಯಲ್ಲಿ ಬೆಂದು
ನಿಂತಿರುವೆ ನೀ ಮೌನದಿ
ಈ ಮೌನವೇಕೆ ಈ ಚಿಂತೆಯೇಕೆ
ಧೈರ್ಯವನ್ನು ನಾ ನೀಡುವೆ
ಬಾಳಲ್ಲಿ ಬೆಳಕಾಗುವೆ
ಮನದಲ್ಲಿ ಭಯವೇತಕೆ
ಎಂದೆದು ಕಾಪಾಡುವೆ
ನಾನೇ ಜೀವ ಮಾರ್ಗ ಸತ್ಯ
ಎಂದು ನೀ ಅರಿತಿಲ್ಲವೇ
ಕತ್ತಲೆಯ ಮುಸುಕು ಕವಿತಿರಲು ಇಹವ
ಅದ ಮಧ್ಯ ನೀ ಹೋಗುವೆ
ಅಡಿಗಡಿಗು ಎಲ್ಲ ಚೈತನ್ಯ ತುಂಬಿ
ಆದರಿಸಿ ನಾ ಪಾಲಿಪೆ
ಬಾಳಲ್ಲಿ ಬೆಳಕಾಗುವೆ