ಕ್ರೂಜಿಯ ವೃಕ್ಷ ಬಳಿಗೆ

ಕ್ರೂಜಿಯ ವೃಕ್ಷ ಬಳಿಗೆ ಬಂದು
ನೋಡು ಮನುಜನೆ ಬಾ ಈಗಲೆ

ಭಾರವಾದ ಕಂಬದೊಳ್, ತೂಗುವವನು ಯಾರು
ಯಾರು ಅಂತ ತಿಳಿದಿಯಾ, ನೋಡಿ ಕರುಣೆ ಪಟ್ಟಿಯ

ಕ್ರೂಜಿಯ ವೃಕ್ಷ ಬಳಿಗೆ ಬಂದು
ನೋಡು ಮನುಜನೆ ಬಾ ಈಗಲೆ

ಮನುಷ್ಯನಂತಿರುವವನ್ಯಾರು, ಹಿಂಸೆಪಡುವ ಇವನ್ಯಾರು
ನನ್ನ ಮುದ್ದು ರಕ್ಷಕ, ಆತ ನೋಡಿ ಅರಿತಿಯಾ

ಕ್ರೂಜಿಯ ವೃಕ್ಷ ಬಳಿಗೆ ಬಂದು
ನೋಡು ಮನುಜನೆ ಬಾ ಈಗಲೆ

ನೋಡು ಪಂಚಗಾಯವಾ, ಸುರಿಯುತ್ತಿರುವ ರಕ್ತವ
ಯಾಕೆ ಅಂತ ತಿಳಿದಿಯಾ, ನಿನ್ನ ದ್ರೋಹಕ್ಕಾಗಿ

ಕ್ರೂಜಿಯ ವೃಕ್ಷ ಬಳಿಗೆ ಬಂದು
ನೋಡು ಮನುಜನೆ ಬಾ ಈಗಲೆ

ನೋಡು ಮುಳ್ಳು ಮಾಲೆಯ, ನೋಡು ಜಡಿದ ಮೊಳೆಯ
ನೋಡು ತಿವಿದ ಪಕ್ಕೆಯ, ಬಟ್ಟೆ ಇಲ್ಲದ ದೇಹವ