ಕ್ರಿಸ್‌ಮಸ್‌ ಹಬ್ಬ ಬಂತು ನೋಡಣ್ಣ

ಕ್ರಿಸ್‌ಮಸ್‌ ಹಬ್ಬ ಬಂತು ನೋಡಣ್ಣ
ಭೂಮಿ ಮ್ಯಾಲೆ ಖುಷಿ ತಂತಣ್ಣ ||2||
ತಾರೆಯೂಂದು ಮೂಡಿ ಬಂತಣ್ಣ
ಆನಂದದ ಹೊಳೆ ಹರಿದು ಬಂತಣ್ಣ

ಅಂದದ ಲೋಕದ ಚಂದದ ಸುತನು ಜನಿಸಿ
ಬಂದಾನೋ ದಯಯಿಂದ ಇಳಿದು ಬಂದಾನೋ ||2||
ಉನ್ನತ ಲೋಕ ಬಿಟ್ಟು ಬಂದಾನೋ ಅನುಗ್ರಹಿಸಿ ಜನಿಸಿ ಬಂದಾನೋ ||2॥
ಕ್ರಿಸ್‌ಮಸ್‌ ಹಬ್ಬ ಬಂತು ನೋಡಣ್ಣ
ಭೂಮಿ ಮ್ಯಾಲೆ ಖುಷಿ ತಂತಣ್ಣ

ಮೇಲಣ ಲೋಕದಿ ದೇವರಿಗೆ ಮಹಿಮೆಯಾಗಲಿ
ಭೂಮಿ ಮ್ಯಾಲೆ ಶಾಂತಿ ಬಿಳಗಲಿ ॥2॥
ದೂತರ್ಗಣ ಸ್ತೋತ್ರ ಮಾಡ್ಯಾರೋ ಹರ್ಷದಿಂದ
ಲೋಕಕ್ಕೆ ಸಾರಾರೋ ॥2॥
ಕ್ರಿಸ್‌ಮಸ್‌ ಹಬ್ಬ ಬಂತು ನೋಡಣ್ಣ
ಭೂಮಿ ಮ್ಯಾಲೆ ಖುಷಿ ತಂತಣ್ಣ

ರಾಜಾದಿ ರಾಜ ಯೇಸು ರಾಜ ಸೌಭಾಗ್ಯ ತಂದಾನೋ
ಲೋಕಕ್ಕಾ ದೀನತ್ವ ಪಡೆದಾನೋ||2॥
ಕೊಂಡಾಡೋಣ ಹರ್ಷಪಡೋಣ ಜಗಕ್ಕೆಲ್ಲಾ ಸಾರಿ ಹೇಳೋಣ ||2||

ಕ್ರಿಸ್‌ಮಸ್‌ ಹಬ್ಬ ಬಂತು ನೋಡಣ್ಣ
ಭೂಮಿ ಮ್ಯಾಲೆ ಖುಷಿ ತಂತಣ್ಣ ||2||
ತಾರೆಯೂಂದು ಮೂಡಿ ಬಂತಣ್ಣ
ಆನಂದದ ಹೊಳೆ ಹರಿದು ಬಂತಣ್ಣ