ಕ್ರೈಸ್ತರಾದ ನಮ್ಮ ಮೇಲೆ ಬಿದ್ದ ಭಾರವು
ದೊಡ್ಡದೆಂದು ಧ್ಯಾನ ಮಾಡು ರಾತ್ರಿ ಹಗಲು
ಭ್ರಾತ್ರರಾದ ಅನ್ಯರನ್ನ ನಾವು ಪ್ರೀತಿಸಿ
ರಕ್ಷಕನ ಹತ್ರ ತರ ಹಂಗಿನವರು
ನಿನ್ನ ತಮ್ಮ ಎಲ್ಲಿದ್ದಾನೆ? ಎಂದು ದೇವರು
ಪ್ರಶ್ನೆ ಕೇಳುವಲ್ಲಿ ನಾವು ಏನು ಹೇಳೇವು
ಭ್ರಾತ್ರರಾದ ಅನ್ಯರನ್ನ ನಾವು ಪ್ರೀತಿಸಿ
ರಕ್ಷಕನ ಹತ್ರ ತರ ಹಂಗಿನವರು
ನೀನು ಇರುವಂಥ ಪ್ರತಿ ಸ್ಥಳದಲ್ಲಿಯು
ಯೇಸುವಿನ ಮಾತಿನಂತೆ ನಿತ್ಯ ವರ್ತಿಸು
ಭ್ರಾತ್ರರಾದ ಅನ್ಯರನ್ನ ನಾವು ಪ್ರೀತಿಸಿ
ರಕ್ಷಕನ ಹತ್ರ ತರ ಹಂಗಿನವರು
ಸಾವಿರಾರು ಮಂದಿ ನಿತ್ಯ ಸಾಯುತ್ತಿರಲು
ಎಚ್ಚರಿಕೆ ಮಾತು ಹೇಳಿ ಪ್ರಾಣ ಕಾಪಾಡು
ಭ್ರಾತ್ರರಾದ ಅನ್ಯರನ್ನ ನಾವು ಪ್ರೀತಿಸಿ
ರಕ್ಷಕನ ಹತ್ರ ತರ ಹಂಗಿನವರು
ಪಾಪಿಯನು ರಕ್ಷಿಸುವ ಪ್ರತಿಯೊಬ್ಬನು
ಜ್ಯೋತಿಯಂತೆ ಶೋಭಿಸುತ ಮಾನ ಹೊಂದುವನು
ಭ್ರಾತ್ರರಾದ ಅನ್ಯರನ್ನ ನಾವು ಪ್ರೀತಿಸಿ
ರಕ್ಷಕನ ಹತ್ರ ತರ ಹಂಗಿನವರು