ಕೊಂಡಾಟ ಕೊಂಡಾಟವೇ ನನ್ನ ಕರ್ತನ ಸನ್ನಿಧಾನದಿ
ಆನಂದ ಆನಂದವೇ ನನ್ನ ಪ್ರಿಯನ ಪಾದದಲಿ
ಪಾಪವೆಲ್ಲಾ ತೊಲಗಿತು ಶಾಪವೆಲ್ಲಾ ನೀಗಿತು
ಯೇಸುವಿನ ರಕ್ತದಿಂದಾ ಕ್ರಿಸ್ತನಲ್ಲಿ ಜೀವನ ಕೃಪೆಯ
ಜೀವನ ಪರಿಶುದ್ದ ಆತ್ಮರಿಂದ
||ಕೊಂಡಾಟ ಕೊಂಡಾಟವೇ ನನ್ನ ಕರ್ತನ ಸನ್ನಿಧಾನದಿ||
ದೇವಾಧಿ ದೇವನು ದಿನದಿನವೂ ತಂಗುವ
ದೇವಾಲಯ ನಾವೇ ಆತ್ಮನ ಮುದ್ರೆ ನನ್ನ ಮೇಲೆ
ಉಂಟು ಅತಿಶಯ ಅತಿಶಯವೇ
||ಕೊಂಡಾಟ ಕೊಂಡಾಟವೇ ನನ್ನ ಕರ್ತನ ಸನ್ನಿಧಾನದಿ||
ತುತೂರಿ ಶಬ್ದ ದೂತರ ಸೈನ್ಯ ಯೇಸು ಬರಲಿರುವಾ
ಕ್ಷಣ ಮಾತ್ರದಲ್ಲಿ ಮಾರ್ಪಾಡು ಹೊಂದಿ ಮಹಿಮೆಯ ಕಾಣುವೆವು
||ಕೊಂಡಾಟ ಕೊಂಡಾಟವೇ ನನ್ನ ಕರ್ತನ ಸನ್ನಿಧಾನದಿ||
ಸರ್ವ ಶಕ್ತ ಯೇಸು ಜೀವಧಾರ ಯೇಸು ಎಂದೆಂದೂ
ಜಯ ನೀಡುವ ಒಮ್ಮನಸ್ಸಿನಿಂದ ಹೊಸನ್ನ ಹಾಡಿ
ಊರಿಗೆಲ್ಲಾ ಸಾರೋಣ ಬಾ
ಕೊಂಡಾಟ ಕೊಂಡಾಟವೇ ನನ್ನ ಕರ್ತನ ಸನ್ನಿಧಾನದಿ
ಆನಂದ ಆನಂದವೇ ನನ್ನ ಪ್ರಿಯನ ಪಾದದಲಿ