ಕೇಳು ದೂತರ್ಗಾನವ, ಘನರಾಜ ಹುಟ್ಟಿದ
ಸ್ವರ್ಗದಲ್ಲಿ ಮಹಿಮೆ, ಭೂಮಿಯಲ್ಲಿ ಕರುಣೆ
ಎಲ್ಲಾ ಜನ ಹರ್ಷಿಸಿ, ದೂತರ್ಕೂಡ ಹಾಡಲಿ
ಬೆತ್ಲೇಮಿನೊಳಗೆ , ಪರಂಜ್ಯೋತಿ ತೋರಿದೆ
ಕೇಳು ದೂತರ್ಗಾನವ, ಘನರಾಜ ಹುಟ್ಟಿದ
ಈಗ ಹುಟ್ಟಿದಾತನು, ಪರಲೋಕದರಸು
ಮೇಲಿನಿಂದ ಇಳಿದು ನರನಾಗಿ ಬಂದನು,
ಪ್ರೀತಿಯಿಂದ ತನ್ನನ್ನು ದೀನಮಾಡಿಕೊಂಡನು.
ದೇವರ ಕುಮಾರನು ಇಲ್ಲಿ ವಾಸಿಸಿದನು
ಕೇಳು ದೂತರ್ಗಾನವ, ಘನರಾಜ ಹುಟ್ಟಿದ
ಓ ಮಹತ್ವದರಸಾ, ಸರ್ವಲೋಕ ರಕ್ಷಕಾ ಸಮಾಧಾನ ಗುರುವೇ.
ಮನಶ್ಯಾಂತಿ ಹುಟ್ಟಿಸಿ ಮೋಕ್ಷಾನಂದ ತಂದಿದ್ದೀ,
ನಮಸ್ಕಾರ ಯೇಸುವೇ, ನಿತ್ಯಾ ಮಾನ ನಿನಗೆ
ಕೇಳು ದೂತರ್ಗಾನವ, ಘನರಾಜ ಹುಟ್ಟಿದ