ಕರುಣಾಳು ದೇವನ ಈ ಪೂಜಾರಾಧನ
ಅದೆ ನನ್ನಾ ಬಾಳಿನ ಮುಕ್ತಿ ಸಾಧನ
ಕರೆ ಕೇಳಿ ನಾ ಬರಲು, ಬಾಳೆ ಪಾವನಾ
ಶರಣಾಗಿ ಜೀವಿಸಲು ನೀಡ್ವೆ ಚೇತನಾ
ಪಡೆದಿರೆ ನಿನ್ನೊಲವಿನ ಜೀವಾ, ಅದುವೇ ಸಂಜೀವನಾ
ಮೂಡಿರಲೂ ಹೃದಯದಲಿ, ಶುಭ ಸಂಕೀರ್ತನಾ
ಸ್ತುತಿಸಿರಲು ಮನದಲ್ಲಿ, ಅದುವೆ ಚಂದನಾ
ಬಾಳಲಿ ಹರುಷದ ಹೊನಲಿರಲು, ಅದುವೆ ಸಂಭಾವನಾ