ಕರ ನೀಡಿಹೆ

ಕರ ನೀಡಿಹೆ ಬಾ ಎಂದಿಹೆ
ನಿನ್ನಂತೆ ನಾನಾಗಲು
ಕರ ನೀಡುವೆ ಕ್ರಪೆ ತೋರುವೆ
ನಿನ್ನಂತೆ ನಾ ಬಾಳಲು

ಜಗಕ್ಕಿಂದು ಬೆಳಕಾಗ ಕರೆದೆ
ಹರಡೆನ್ನ ಶುಭವಾರ್ತೆ ಎಂದೆ
ಹರಸೆನ್ನ ಇಂದು ವರನೀಡು ಬಂದು
ಓ ದೇವ ನಿನ್ನಂತೆ ನಾ ಬಾಳಲು

ಕರ ನೀಡಿಹೆ ಬಾ ಎಂದಿಹೆ
ನಿನ್ನಂತೆ ನಾನಾಗಲು
ಕರ ನೀಡುವೆ ಕ್ರಪೆ ತೋರುವೆ
ನಿನ್ನಂತೆ ನಾ ಬಾಳಲು

ಮನದಲ್ಲಿ ಮನೆ ಮಾಡು ಇಂದು
ಬೆಳಕಲ್ಲಿ ನಡೆಸೆನ್ನ ಎಂದು
ಶಿರಬಾಗಿ ನಡೆವೆ ನನ್ನನ್ನೆ ಕೊಡುವೆ
ಕ್ರಪೆ ಮಾಡು ಕರುಣಾಳು ಓ ತಂದೆಯೇ