Index Page

ಕಲ್ವಾರಿಯ ಪ್ರೀತಿಯ

ಕಲ್ವಾರಿಯ ಪ್ರೀತಿಯ, ನೆನೆದಾಗ ಮನಃ
ಕರಗಿದೆ…ಓ…ಯೇಸಯ್ಯ
ನಿನ್ನ ತ್ಯಾಗಕ್ಕೆ…ಈ…ಜೀವ…ತಲೆಬಾಗಿದೆ

|| ಘೋರ ಘೋರ ಘೋರ,
ಆ ಶಿಲುಬೆಯ ಮರಣ ಘೋರ
ಭಾರ ಭಾರ ಭಾರ, ನನ್ನ ಹೃದಯದೀ ಭಾರ ||2||

1)ಓ ಯೇಸುವೇ ನಿನ್ನ ಈ ಪ್ರೀತಿ ಅರಿಯೇ
ಈ ಲೋಕದ ಪಾಪವ ಹೊರುವ ಕುರಿಯೇ
ನಾ ಪಡೆದ ಶಾಪ, ನೀ ಹೊತ್ತು ನಡೆದೆ
ಆ ಶಿಲುಬೆಯಲ್ಲಿ ಮರಣವ ಸವಿದೆ
ಓ…ದೇವನೇ ನನ್ನಲ್ಲೇಕೆ ಇಂಥ ಪ್ರೀತಿ

|| ಘೋರ ಘೋರ ಘೋರ,
ಆ ಶಿಲುಬೆಯ ಮರಣ ಘೋರ
ಭಾರ ಭಾರ ಭಾರ, ನನ್ನ ಹೃದಯದೀ ಭಾರ ||2||

2) ಓ…ಕರ್ತನೆ ನಿನ್ನ ಕೈಗೊಂಬೆ ನಾನು
ನಿನ್ನ ಶ್ವಾಸದೀ…ಜೀವಿಸೋ ಜೇಡಿ ಮಣ್ಣು
ನನ್ನಪರಾಧಕ್ಕೆ…ನಿನ್ನ ರಕ್ತ ಸುರಿಸಿದೆ
ಕಲ್ವಾರಿಯಲ್ಲಿ ಶಿಕ್ಷೆಯ
ಸಹಿಸಿದೆ ಓ…ದೇವನೇ ನಿನ್ನ ಈ ತ್ಯಾಗಕ್ಕೆ ಭ್ರಮಿಸಿ ಹೋದೆ

|| ಘೋರ ಘೋರ ಘೋರ,
ಆ ಶಿಲುಬೆಯ ಮರಣ ಘೋರ
ಭಾರ ಭಾರ ಭಾರ, ನನ್ನ ಹೃದಯದೀ ಭಾರ ||2||

ಕಲ್ವಾರಿಯ ಪ್ರೀತಿಯ, ನೆನೆದಾಗ ಮನಃ
ಕರಗಿದೆ…ಓ…ಯೇಸಯ್ಯ
ನಿನ್ನ ತ್ಯಾಗಕ್ಕೆ…ಈ…ಜೀವ…ತಲೆಬಾಗಿದೆ