Index Page

ಕಾಲವು ಸಾಗರವಾದಲ್ಲಿ

ಕಾಲವು ಸಾಗರವಾದಲ್ಲಿ
ನನ್ನಯ ನೆನಪು ಬಂದಲ್ಲಿ
ನೀ ನನ್ನ ಬಳಿಗೆ ಬರುವೆಯಾ
ನೀ ನನ್ನ ಮರೆತೆಯಾ

ಕಷ್ಟದ ಕಡಲಲ್ಲಿ ಮುಳುಗಿ
ಮಗನೆ ನನ್ನಿಂದ ನೀ ದೂರ ಹೋದೆಯಾ
ಅಭಯ ನೀಡಲು ದಾರಿಯ ತೋರಲು,
ಹತ್ತಿರಕ್ಕೆ ನೀ ಬಾರಯ್ಯಾ ೨
ನೀ ನನ್ನ ಬಳಿಗೆ ಬರುವೆಯಾ
ನೀ ನನ್ನ ಮರೆತೆಯಾ

ಲೋಕದ ಕಡಲಲ್ಲಿ ಮುಳುಗಿ ಮಗನೇ
ಆತ್ಮದ ಜ್ಯೋತಿಯ ನೀ ನಂದಿಸಿ ೨
ಮರೆತೆಯಾ ಮುನುಜನೇ ನೀನಗಾಗಿಯೇ
ಶಿಲುಬೆಯಲಿ ಬಲಿಯಾದೆನಾ ೨
ನೀ ನನ್ನ ಬಳಿಗೆ ಬರುವೆಯಾ
ನೀ ನನ್ನ ಮರೆತೆಯಾ

ಕಾಲವು ಸಾಗರವಾದಲ್ಲಿ
ನನ್ನಯ ನೆನಪು ಬಂದಲ್ಲಿ
ನೀ ನನ್ನ ಬಳಿಗೆ ಬರುವೆಯಾ
ನೀ ನನ್ನ ಮರೆತೆಯಾ