Index Page

ಕಾದಿದೆ ಹ್ರದಯವು

ಕಾದಿದೆ ಹ್ರದಯವು ಜೀವ ಜಲಕೆ
ಬಯಸಿದೆ ಮನವು ಜೀವಂತ ದೇವನಿಗೆ

ಜೀವ ಕೊಡುವ ರೊಟ್ಟಿಯು ನಾನೇ
ಎಂದಿಹ ಓ ದೇವಾ
ನಿನ್ನ ಭುಜಿಸಿ ಜೀವಾ ನಾ ಪಡೆವೆ
ಬಂದು ಬಾಳು ಎನ್ನಲ್ಲೀ ಓ ಶ್ರೀಯೇಸುವೆ

ಕಾದಿದೆ ಹ್ರದಯವು ಜೀವ ಜಲಕೆ
ಬಯಸಿದೆ ಮನವು ಜೀವಂತ ದೇವನಿಗೆ

ನೊಂದ ಮನಕೆ ಶಾಂತಿಯ ನೀಡ್ವ
ಪ್ರೀತಿಯ ಓ ದೇವಾ
ಎನ್ನ ಹ್ರದಯ ನಿನ್ನ ದೇಗುಲ
ಬಂದು ಬಾಳು ಎನ್ನಲ್ಲೀ ಓ ಶ್ರೀಯೇಸುವೆ