ಜೇನಿನ ರುಚಿಗಿಂತ ಯೇಸು

ಜೇನಿನ ರುಚಿಗಿಂತ ಯೇಸು ಸುನಾಮವು
ದಿವ್ಯಮಧುರವಾದದ್ದೇ ಧ್ಯಾನಕ್ಕೆ ತಂದು
ಹೊಂದಲು ಬನ್ನಿರಾತನ ಸೇವಕರೇ

ಲೋಕದ ಮೇಲೆ ಪ್ರೀತಿಯ
ತುಂಬಿ ಕಷ್ಟಗಳನ್ನು ತಾಳಿ
ಪಾಪ ಶೋಕವ ಹರಿಸಿ ಪಾಪವ
ಕಳೆದನು ಧ್ಯಾನಿಸು ನೀ ಮನವೇ

ಜೇನಿನ ರುಚಿಗಿಂತ ಯೇಸು ಸುನಾಮವು
ದಿವ್ಯಮಧುರವಾದದ್ದೇ

ಪಾಪಿಯನುಳಿಸಲು ಹೀಗೆಯೆ ತನ್ನ
ಪ್ರಾಣವನ್ನೆ ಕೊಟ್ಟ ಭೂಪನ ಕರುಣೆ
ಸುಸ್ತಿರವದನು ಬಿಡದೆ ಸೇವಿಸಿರಿ

ಜೇನಿನ ರುಚಿಗಿಂತ ಯೇಸು ಸುನಾಮವು
ದಿವ್ಯಮಧುರವಾದದ್ದೇ

ಭೂಲೋಕದವರು ಮೇಲೋಕದವರೂ
ಕೀರ್ತಿಪ ನಾಮವನ್ನು
ಭಜಿಸಿ ಮೇಲಿನ ಧನವಂ ಹೊಂದುವಿರೆಲ್ಲರು
ನಿಶ್ಚಯ ನಿಶ್ಚಯವೇ

ಜೇನಿನ ರುಚಿಗಿಂತ ಯೇಸು ಸುನಾಮವು
ದಿವ್ಯಮಧುರವಾದದ್ದೇ ಧ್ಯಾನಕ್ಕೆ ತಂದು
ಹೊಂದಲು ಬನ್ನಿರಾತನ ಸೇವಕರೇ