ಜೀವಿಸುವ ಯೇಸು ದೇವರು
ಜೀವಿಸುವ ಯೇಸು ದೇವರು ನಿನ್ನನ್ನು ಕರೆಯುತ್ತಾನೆ
ಅಂಗೀಕರಿಸು ಆತನನ್ನು ಯಾತಕ್ಕೆ ತಾಮಾಸವು ||2||
ನಿನ್ನ ಚಿಂತೆಯ ನಿನ್ನ ದುಃಖವ ಆತನಿಗೆ ಒಪ್ಪಿಸು ನೀ
ನಿನ್ನ ಕಷ್ಟವ ನಿನ್ನ ಭಾರವ ಆತನೇ ಹೊರುವವನು||2||
ಲೋಕಕ್ಕಿಂತಲೂ ಯೇಸು ನಿನ್ನನ್ನು ಪ್ರೀತಿಸುವನು
ನೀನು ಲೋಕದ ಆಶೆ ಬಿಟ್ಟು ಈಗಲೇ ಸ್ವೀಕರಿಸು||2||
ನಿನ್ನ ಪಾಪವು ಕೆಂಪಗಿದ್ದರು ಬೆಳ್ಳಗೆ ಮಾಡುವನು
ನಿನ್ನ ದ್ರೋಹವ ಅಳಿಸಿ ಬಿಟ್ಟು ರಕ್ಷಣೆ ನೀಡುವನು||2||
ಜೀವಿಸುವ ಯೇಸು ದೇವರು ನಿನ್ನನ್ನು ಕರೆಯುತ್ತಾನೆ
ಅಂಗೀಕರಿಸು ಆತನನ್ನು ಯಾತಕ್ಕೆ ತಾಮಾಸವು ||2||
ಅಂಗೀಕರಿಸು ಆತನನ್ನು ಯಾತಕ್ಕೆ ತಾಮಾಸವು