ಜೀವನಕೆ ಹೊಸ ಶಕ್ತಿ ತುಂಬಿದೆ
ಬಾಳಿದಕೆ ಹೊಸ ಅರ್ಥ ನೀಡಿದೆ
ಓ ದೇವನೆ ಈ ದೀನನ ಮೇಲೆತ್ತಿ
ಪಾಲಿಸಿದೆ ಸ್ವಾಮಿ ನನ್ನಲ್ಲಿ ಕರುಣಿಸಿದೆ
ಅಂಧಗೆ ಕಂಣ್ಗಳ ನೀಡಿದೆ ನೀ
ಮೂಕಗೆ ಮಾತನು ಕರುಣಿಸಿದೆ
ಹೆಳವಗೆ ಕಾಲ್ಗಳ ನೀಡಿದೆ ನೀ
ಪಾಪಿಯ ಬಾಳನು ಬೆಳಗಿಸಿದೆ
ಚರಣದಲಿ ಬೇಡಿದೆ ನಾ
ಶರಣೆನುತಾ ಬೇಡಿದೆ ನಾ
ಓ ದೇವ ಹೂವಾಯ್ತು ಈ ಜೀವನ
ಜೀವನಕೆ ಹೊಸ ಶಕ್ತಿ ತುಂಬಿದೆ
ಬಾಳಿದಕೆ ಹೊಸ ಅರ್ಥ ನೀಡಿದೆ
ಓ ದೇವನೆ ಈ ದೀನನ ಮೇಲೆತ್ತಿ
ಪಾಲಿಸಿದೆ ಸ್ವಾಮಿ ನನ್ನಲ್ಲಿ ಕರುಣಿಸಿದೆ
ರೋಗದಿ ನೊಂದ ಜೀವಿಗಳ
ನೋವನು ನೀಗಿಸಿ ಕಾಪಾಡಿದೆ
ನೆಮ್ಮದಿ ಇಲ್ಲದ ಆ ಮನಕೆ
ಶಾಂತಿಯ ನೀಡಿ ದಯೆ ತೋರಿದೆ
ನೀ ನನಗೆ ನಾ ನಿನಗೆ
ಬಂಧವಿದು ಕೊನೆವರೆಗೆ
ಓ ದೇವಾ ಹೂವಾಯ್ತು ಈ ಜೀವನ